ಕರ್ನಾಟಕದಲ್ಲಿ ಒಂದೇ ದಿನ 388 ಕೊರೋನಾ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಕುರಿತ ವರದಿ ಜನರನ್ನು ಬೆಚ್ಚಿ ಬೀಳಿಸಿದೆ. ಮಂಗಳವಾರ ಸಂಜೆ ನಂತರ ಇಂದು ಸಂಜೆಯವರೆಗೆ 388 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಕೊರೋನಾ ವಿದ್ಯಮಾನಗಳ ಬಗ್ಗೆ ನಿತ್ಯವೂ ಮಾಹಿತಿ ಬಹಿರಂಗ ಪಡಿಸುತ್ತಿರುವ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಒಂದೇ ದಿನ 388 ಪಾಸಿಟಿವ್ ಕೇಸ್’ಗಳು ಪತ್ತೆಯಾಗಿರುವುದನ್ನು ಬಹಿರಂಗಪಡಿಸಿದೆ. ಉಡುಪಿ ಜಿಲ್ಲೆಯೊಂದರಲ್ಲೇ 150 ಪ್ರಕರಣಗಳು ಪತ್ತೆಯಾಗಿದ್ದರೆ, ಕಲಬುರಗಿಯಲ್ಲಿ 100 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

 • ಉಡುಪಿ : 150 ಹೊಸ ಕೇಸ್
 • ಕಲಬುರಗಿ : 100 ಹೊಸ ಕೇಸ್
 • ಬೆಳಗಾವಿ : 51 ಹೊಸ ಕೇಸ್
 • ರಾಯಚೂರು : 16 ಹೊಸ ಕೇಸ್
 • ಬೆಂಗಳೂರು ನಗರ : 12 ಹೊಸ ಕೇಸ್
 • ಬೀದರ್ : 10 ಹೊಸ ಕೇಸ್
 • ಹಾಸನ : 9 ಹೊಸ ಕೇಸ್
 • ಬಾಗಲಕೋಟೆ : 9 ಹೊಸ ಕೇಸ್
 • ದಾವಣಗೆರೆ : 7 ಹೊಸ ಕೇಸ್
 • ಯಾದಗಿರಿ : 5 ಹೊಸ ಕೇಸ್
 • ಮಂಡ್ಯ : 4 ಹೊಸ ಕೇಸ್
 • ವಿಜಯಪುರ : 4 ಹೊಸ ಕೇಸ್
 • ಬೆಂಗಳೂರು ಗ್ರಾಮಾಂತರ : 3 ಹೊಸ ಕೇಸ್
 • ಚಿಕ್ಕಬಳ್ಳಾಪುರ : 2 ಹೊಸ ಕೇಸ್
 • ಧಾರವಾಡ : 2 ಹೊಸ ಕೇಸ್
 • ತುಮಕೂರು : 2 ಹೊಸ ಕೇಸ್
 • ಕೋಲಾರ : 1 ಹೊಸ ಕೇಸ್
 • ಹಾವೇರಿ : 1 ಹೊಸ ಕೇಸ್

ಇದನ್ನೂ ಓದಿ.. ‘ಕೊರೊನಾ ವೈರಸ್’ ಹೆಸರಲ್ಲೇ ಸಿನಿಮಾ

ಈ ಮಧ್ಯೆ ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 3796ಕ್ಕೆ ಏರಿಕೆಯಾಗಿದೆ. ಈ ಪೈಕಿ 1403 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಕೊರೋನಾ ಸೋಂಕಿತರ ಪೈಕಿ ಬಹುತೇಕ ಮಂದಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಮರಳಿದವರು. ಈ ಬಗ್ಗೆಯೂ ಅಂಕಿ ಅಂಶ ಒದಗಿಸಿರುವ ಆರೋಗ್ಯ ಇಲಾಖೆ ಇಂದಿನ ಪ್ರಕರಣಗಳಲ್ಲಿ
367 ಮಂದಿ ಅಂತಾರಾಜ್ಯ ಪ್ರಯಾಣ ಹಿನ್ನೆಲೆಯುಳ್ಳವರೆಂದು ಹೇಳಿದೆ.

ಇದನ್ನೂ ಓದಿ.. ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿ; ಯಶೋಗಾಥೆ ಬರೆದ ವೈದ್ಯರಿಗೆ ಅಭಿನಂದನೆ 

 

Related posts