ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮೋದಿ ಮಾತು; ಪ್ರಧಾನಿ ಭಾಷಣದ ಹೈಲೈಟ್ ಇಲ್ಲಿದೆ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೋವಿಡ್-19 ವೈರಸ್ ಹಾವಳಿ ಭಾರತದಲ್ಲೂ ಆತಂಕದ ಅಲೆ ಎಬ್ಬಿಸಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೋನಾ ವೈರಾಣು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ. ಈ ಸೂತ್ರ ಅನುಸರಿಸಲೆಂದೇ ದೇಶಾದ್ಯಂತ ಲಾಕ್’ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕ ಸಭೆ ಸಮಾರಂಭಗಳಿಗಿಲ್ಲ ಅವಕಾಶ. ಸಮಾರಂಭ, ಸಭೆಗಳೂ ನಡೆಯದೆ ಜನ ಗುಂಪು ಸೇರುತ್ತಿಲ್ಲ. ಆದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ದೇಶಕ್ಕೆ ಸವಾಲೆಂಬಂತಾಗಿದೆ.

ಈ ಸಂದರ್ಭದಲ್ಲಿ ಇದೀಗ ಮತ್ತೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಮತ್ತಷ್ಟು ಕಿವಿಮಾತು ಹೇಳಿದ್ದಾರೆ. ಲಾಕ್’ಡೌನ್ ಬಳಿಕ 2 ನೇ ಮನ್ ಕೀ ಬಾತ್ ರೇಡಿಯೋ ಭಾಷಣ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ಮೋದಿ, ಇಡೀ ದೇಶದ ಜನ ಕೊರೋನಾ ವಿರುದ್ಧ ಯುದ್ಧ ಮಾಡುತ್ತಿದ್ದಾರೆ ಎಂದರು.

—– ಪ್ರಮುಖ ಸುದ್ದಿಗಳು: ಇದನ್ನೂ ಓದಿ —-

 

ಪ್ರಧಾನಿ ಭಾಷಣದ ಹೈಲೈಟ್ ಇಲ್ಲಿದೆ

 • ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಈ ಯುದ್ಧ ಮಾಡುತ್ತಿದ್ದಾರೆ.
 • ಸಾಮಾನ್ಯ ಜನರ ನೇತೃತ್ವದಲ್ಲಿ ನಡೆಯುತ್ತಿರುವ ಯುದ್ಧ ಇದಾಗಿದೆ.
 • ನಿಮ್ಮ ಮನದ ಮಾತುಗಳು ನನ್ನನ್ನು ತಲುಪಿದೆ
 • ಜನ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದಾರೆ.
 • ಇಡೀ ದೇಶದ ಚಿತ್ತ ಒಂದೇ ಕಡೆ ಇದೆ
 • ಈ ಯುದ್ಧ ಮೂಲಕ ಇಡೀ ದೇಶ ಒಂದಾಗಿದೆ.
 • ಪ್ರತಿಯೊಬ್ಬ ನಾಗರಿಕನೂ ಇದರಲ್ಲಿ ಸೈನಿಕ.
 • ದೇಶದ 130 ಕೋಟಿ ಜನರೂ ಇದರಲ್ಲಿ ಸೈನಿಕ. 
 • ನಾವೆಲ್ಲರೂ ಒಗ್ಗಟ್ಟಾಗಿ ಕೊರೋನಾವನ್ನು ಓಡಿಸಬೇಕಾಗಿದೆ.
 • ಮಹಾಮಾರಿ ನಡುವೆಯೂ ರೈತರು ಕೃಷಿಯಲ್ಲಿ ತೊಡಗಿದ್ದಾರೆ.
 • ಕೆಲವರು ತಮ್ಮ ಬೆಳೆಗಳನ್ನು ದಾನ ಮಾಡುತ್ತಿದ್ದಾರೆ
 • ದೇಶವು ವೈದ್ಯಕೀಯ ಕ್ಷೇತ್ರದಲ್ಲೂ ಸಾಧಿಸುತ್ತಿದೆ.
 • ಇಡೀ ವೈದ್ಯಲೋಕ ಕೊರೋನಾ ವಿರುದ್ಧ ಸೆಣಸಾಡುತ್ತಿದೆ.
 • ವೈದ್ಯರ, ನರ್ಸ್’ಗಳ ಸೇವೆ, ತ್ಯಾಗಕ್ಕೆ ನಾವು ಗೌರವ ಸಲ್ಲಿಸಲೇಬೇಕು
 • ಪೊಲೀಸರೂ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ.
 • ಕೊರೋನಾ ವಾರಿಯರ್ಸ್ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವೇ ಇಲ್ಲ
 • ಕೊರೋನಾ ವಾರಿಯರ್ಸ್’ಗಾಗಿ ವೆಬ್ಸೈಟ್ ಆರಂಭಿಸಲಾಗಿದೆ.
 • ವೈದ್ಯಕೀಯ ಸಿಬ್ಬಂದಿ ರಕ್ಷಣಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
 • ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರನ್ನು ಶಿಕ್ಷಿಸಲಾಗುತ್ತದೆ.
 • ಪೌರ ಕಾರ್ಮಿಕರಿಗೂ ಹೂಮಾಲೆ ಮೂಲಕ ಅಭಿನಂದಿಸಲಾಗುತ್ತಿದೆ.
 • ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ 
 • ಜಗತ್ತಿನ ಇತರ ರಾಷ್ಟ್ರಗಳಿಗೂ ಭಾರತ ಸಹಾಯಹಸ್ತ ಚಾಚಿದೆ. 
 • ಅಗತ್ಯ ವಸ್ತುಗಳನ್ನು ವಿದೇಶಗಳಿಗೆ ನೀಡಿದೆ
 • ಭಾರತದ ಕೊಡುಗೆಯನ್ನು ಇಡೀ ವಿಶ್ವವೇ ಹೊಗಳುತ್ತಿದೆ
 • ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕ್ರತವ್ಯ
 • ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ
 • ವಿವಿಧ ದೇಶಗಳ ನಾಯಕರು ಕರೆ ಮಾಡಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ
 • ದಯವಿಟ್ಟು ಮಾಸ್ಕ್ ಧರಿಸಿ ಎಂದು ಇಡೀ ದೇಶಕ್ಕೆ ಮನವಿ ಮಾಡುತ್ತಿದ್ದೇನೆ
 • ಮಾಸ್ಕ್ ಧರಿಸುವುದರಿಂದ ಮಾತ್ರ ಕೊರೋನಾದಿಂದ ಪಾರಾಗಬಹುದು 
 • ಸಾಮಾಜಿಕ ಅಂತರ ಕಾಯ್ದುಕೊಳ್ಳಿ
 • ಪರಿಸರದ ಬಗ್ಗೆ ಎಲ್ಲರೂ ಕಾಳಜಿ ವಹಿಸಿ
 • ಯಾವುದೇ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ
 • ಸರ್ಕಾರಾದ ನಿಯಮಗಳನ್ನು ತಪ್ಪದೆ ಪಾಲಿಸಿ
 • ಟ್ಯಾಂಕ್ಯು ಇಂಡಿಯಾ ಅಂತ ಹೇಳುತ್ತಿದ್ದೇನೆ 
 • ಇಂದು ಭಗವಾನ್ ಮಹಾವೀರ ಜಯಂತಿ
 • ಅಕ್ಷಯ ತೃತೀಯ ದಿನವೂ ಹೌದು.
 • ನಮ್ಮ ಆತ್ಮ, ಭಾವ ಅಕ್ಷಯವಾಗಲಿ
 • ಒಳ್ಳಯ ಕೆಲಸ ಆರಂಭಿಸಲು ಶುಭ ದಿನ
 • ಬಸವ ಜಯಂತಿಯಾದ ಇಂದು ಇಡೀ ದೇಶ ಬಸವಣ್ಣರನ್ನು ನೆನಪಿಸುತ್ತಿದ್ದೇವೆ.
 • ಇಂತಹಾ ಕಷ್ಟದ ದಿನಗಳಲ್ಲಿ ಬಸವಣ್ಣನ ಮಾತುಗಳು ನಮಗೆ ಆದರ್ಶ
 • ಈಸ್ಟರ್ ಹಬ್ಬವನ್ನೂ ಮನೆಯಲ್ಲೇ ಕುಳಿತು ಆಚರಿಸಲಾಯಿತು
 • ಎಲ್ಲಾ ಹಬ್ಬಗಳನ್ನೂ ಮನೆಯೊಳಗೇ ಸೀಮಿತಗೊಳಿಸಲಾಯಿತು 

ಇದನ್ನೂ ಓದಿ.. ಜೂನ್ 30ರ ವರೆಗೂ ಮದುವೆ, ಸಭೆ ಸಮಾರಂಭ ನಿಷೇಧ..? 

 

 

Related posts