ಕೊರೋನಾದಿಂದ ಕಂಗಾಲಾಯಿತೇ ಅಮೆರಿಕ? ಸೋಂಕಿತರಿಗೆ ವಿಷ ಪ್ರಾಶನ ಮಾಡಲು ಸೂಚಿಸಿದರೇ ಟ್ರಂಪ್?

ವಾಷಿಂಗ್’ಟನ್: ಚೀನಾದ ಕೂಸು ಅಗೋಚರ ಕೊರೋನಾ ವೈರಸ್ ಇಡೀ ಅಮೆರಿಕವನ್ನು ಸ್ಮಶಾನವನ್ನಾಗಿಸಿದೆ. ನಿತ್ಯವೂ ಸಾವಿರಾರು ಮಂದಿ ಬಲಿಯಾಗುತ್ತಿದ್ದು ವಿಶ್ವದ ಹಿರಿಯಣ್ಣನನ್ನು ಸೂತಕದ ಛಾಯೆ ಆವರಿಸುವಂತೆ ಮಾಡಿದೆ.

ಅಮೆರಿಕದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು ಅದನ್ನು ನಿಯಂತ್ರಿಸಲು ವೈದ್ಯರ ಪಡೆ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. ಆದರೂ ಸೋಂಕು ನಿಯಂತ್ರಣ ತಡೆಯಲು ಸಾಧ್ಯವಾಗುತ್ತಿಲ್ಲ. ಮಾರಣ ಹೋಮವೂ ನಿಲ್ಲುತ್ತಿಲ್ಲ.

ಇದನ್ನೂ ಓದಿ.. ಜೂನ್ 30ರ ವರೆಗೂ ಮದುವೆ, ಸಭೆ ಸಮಾರಂಭ ನಿಷೇಧ..?

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ಲೀಚ್ ಹಾಗೂ ಇನ್ನಿತರೇ ಸೋಂಕುನಿವಾರಕಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡುವಂತೆ ಸಲಹೆ ನೀಡಿದ್ದಾರಂತೆ. ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಟ್ರಂಪ್ ಅವರು, ಪರಿಸರದಲ್ಲಿನ ವೈರಸನ್ನು ತೊಲಗಿಸಲು ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ಸಿಂಪಡಿಸಲಾಗುತ್ತದೆ. ಹಾಗೆಯೇ ರೋಗಿಗಳಿಗೂ ಇದನ್ನು ಚುಚ್ಚು ಮದ್ದು ರೀತಿ ನೀಡುವುದರಿಂದ ಕೊರೋನಾ ವೈರಸ್ ತೊಲಗಿಸಬಹುದಾಗಿದೆ. ಶ್ವಾಸಕೋಶ ಇದರಿಂದ ಸ್ವಚ್ಛವಾಗಲಿದೆ ಎಂದು ವೈದ್ಯರು, ವಿಜ್ಞಾನಿಗಳು ಪರಿಗಣಿಸಬಹುದೇನೋ ಎಂದು ಹೇಳಿದ್ದರಂತೆ.

ಇದನ್ನೂ ಓದಿ.. ಕೊರೋನಾ ವಿಚಾರದಲ್ಲೂ ಮೋದಿ ‘ರಣವಿಕ್ರಮ’: ಮತ್ತೊಂದು ಖ್ಯಾತಿಯ ಕಿರೀಟ

ಟ್ರಂಪ್ ಅವರ ಈ ಸಲಹೆ ಬಗ್ಗೆ ಜಗತ್ತಿನಾದ್ಯಂತ ಬಗೆಬಗೆಯಲ್ಲಿ ಪ್ರತಿಕ್ರಿಯೆ ಕೇಳಿಬರುತ್ತಿದೆ. ವ್ಯಂಗ್ಯದ ಮಾತುಗಳೂ ಹರಿದಾಡುತ್ತಿದ್ದು ಈ ಪ್ರತಿಕ್ರಿಯೆಗಳಿಂದಾಗಿ ಟ್ರಂಪ್ ಅವರು ತೀವ್ರ ಮುಜುಗರಕ್ಕೊಳಗಾಗಿದ್ದಾರಂತೆ.  ಸಾಮಾನ್ಯವಾಗಿ  ಬ್ಲೀಚಿಂಗ್ ಪೌಡರ್ ಮತ್ತಿತರ ಸೋಂಕು ನಿರಾರಕ ದ್ರಾವಣವನ್ನು ಬಚ್ಚಲು ಕೋಣೆ, ಶೌಚಾಲಯ ಸ್ವಚ್ಛತೆಗೆ ಬಳಸುತ್ತಾರೆ. ಇದನ್ನು ವಿಷಯುಕ್ತ ದ್ರಾವಣ ಎಂದೂ ಪರಿಗಣಿಸಲಾಗಿದೆ. ಇಂತಹಾ ವಿಷ ದ್ರಾವಣವನ್ನು ಕೊರೋನಾ ರೋಗಿಗಳಿಗೆ ಇಂಜೆಕ್ಟ್ ಮಾಡಲು ಸಾಧ್ಯವೇ? ಇದೇ ರೀತಿ, ಟ್ರಂಪ್ ಅವರ ಮಾತುಗಳನ್ನು ಕೇಳಿ ವೈದ್ಯ ಲೋಕವೂ ಬೆಚ್ಚಿ ಬಿದ್ದಿತ್ತು.

ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತಾಗುತ್ತಿದ್ದಂತೆ ಗಲಿಬಿಲಿಗೊಂಡ ಟ್ರಂಪ್ ಸಹವರ್ತಿಗಳು ತಕ್ಷಣವೇ ಸ್ಪಷ್ಟನೆ ನೀಡಿದ್ದಾರೆ. ಟ್ರಂಪ್ ಅವರು ವ್ಯಂಗ್ಯಧಾಟಿಯಲ್ಲಿ ಮಾತಾಡಿದ್ದಾರಷ್ಟೇ. ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಅಧ್ಯಕ್ಷರ ಕಚೇರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

 

ಇದನ್ನೂ ಓದಿ.. ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App 

 

Related posts