ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಪುಣ್ಯವಿಲ್ಲ; ದೇವ ಭಾಷೆಯಲ್ಲಿ ಟ್ವೀಟ್ ಮಾಡಿದ ಪ್ರಧಾನಿ

ದೆಹಲಿ: ಫ್ರಾನ್ಸ್’ನಲ್ಲಿ ನಿರ್ಮಾಣಗೊಂಡಿರುವ ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಗೆ ಬಂದಿಳಿದಿದ್ದು, ಈ ವಿಮಾನಗಳ ಸೇರ್ಪಡೆ ಮೂಲಕ ಭಾರತದ ವಾಯುಪಡೆಗೆ ಭೀಮ ಬಲ ಬಂದಿದೆ. ಅಂಬಾಲದಲ್ಲಿ ಬುಧವಾರ ಈ ವಿಮಾನಗಳನ್ನು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭೌದೂರಿಯಾ ಬರಮಾಡಿಕೊಂಡಾಗ ಇಡೀ ದೇಶದ ಮಂದಿ ಪುಳಕಿತರಾದರು.

ಹರಿಯಾಣದ ಅಂಬಾಲ ವಾಯುನೆಲೆಗೆ ಮೊದಲ ತಂಡದ 5 ರಫೇಲ್ ಯುದ್ಧ ವಿಮಾನಗಳ ಆಗಮನ ಸನ್ನಿವೇಶ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರಮೋದಿ, ದೇವ ಭಾಷೆ ಸಂಸ್ಕೃತದಲ್ಲಿ ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಪುಣ್ಯವಿಲ್ಲ ಎಂದವರು ಹೇಳಿದ್ದಾರೆ.

ಇದನ್ನೂ ಓದಿ.. ಒಂದೇ ನಂಬರ್.. 4 ಮೊಬೈಲ್’ಗಳಲ್ಲಿ ಬಳಕೆ : WhatsApp ಹೊಸ ಫೀಚರ್ ಬಗ್ಗೆ ಗೊತ್ತಾ? 

 

Related posts