ಒಂದೇ ನಂಬರ್.. 4 ಮೊಬೈಲ್’ಗಳಲ್ಲಿ ಬಳಕೆ : WhatsApp ಹೊಸ ಫೀಚರ್ ಬಗ್ಗೆ ಗೊತ್ತಾ?

ಸಾಮಾಜಿಕ ಜಾಲತಾಣಗಳ ಪೈಕಿ ಜನಸ್ನೇಹಿಯಾಗಿರುವ ವಾಟ್ಸಪ್ ಇದೀಗ ತನ್ನ ಚಂದಾದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಫೇಸ್’ಬುಕ್’ನ ಅಂಗ ಸಂಸ್ಥೆ ವಾಟ್ಸಪ್ ದಿಟ್ಟ ಹೆಜ್ಜೆ ಇಟ್ಟಿದೆ. ಒಂದೇ ನಂಬರಿನ ವಾಟ್ಸಪ್’ನ್ನು ನಾಲ್ಕು ಮೊಬೈಲ್ ಸೆಟ್’ಗಳಲ್ಲಿ ಆಪರೇಟ್ ಮಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

 

ಪ್ರಸ್ತುತ ಒಂದು ನಂಬರಿನಲ್ಲಿ ಇನ್’ಸ್ಟಾಲ್ ಮಾಡಿರುವ ವಾಟ್ಸಪ್’ನ ಆಪ್ ಅದೇ ಹೊತ್ತಿಗೆ ಬೇರೋದು ಸೆಟ್’ನಲ್ಲಿ ಬಳಸಲು ಸಾಧ್ಯವಿಲ್ಲ. ಒಂದು ಮೊಬೈಲ್ ಸೆಟ್ ಹಾಗೂ ನಿಗದಿತ ಅಂತರದಲ್ಲಿ ಒಂದು ವೆಬ್ ವಾಟ್ಸಾಪ್ ಮೂಲಕ ಬಳಕೆ ಸಾಧ್ಯವಿದೆ. ಇನ್ನು ಮುಂದೆ ಮಲ್ಟಿ ಡಿವೈಸ್ ಫೀಚರನ್ನು ನೀಡಲು ವಾಟ್ಸಪ್ ಮುಂದಾಗಿದೆ. ಈ ಮೂಲಕ ಯಾರಾದರೂ ತಮ್ಮ ಒಂದೇ ವಾಟ್ಸಪ್ ನಂಬರನ್ನು ಏಕಕಾಲದಲ್ಲಿ ನಾಲ್ಕು ಬೇರೆಬೇರೆ ಡಿವೈಸ್ ಗಳಲ್ಲಿ ಬಳಸಲು ಅನುಕೂಲವಾಗಲಿದೆ.

ಸಧ್ಯ ವಾಟ್ಸಪ್ ಬಿಟಾ ಆವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರೂ ಬಳಸುವಂತಾಗಲಿದೆ. ವಾಟ್ಸಪ್’ನ ಬಲತುದಿಯಲ್ಲಿನ ಮೂರು ಚುಕ್ಕೆಗಳ ಒತ್ತಿದಾಗ Linked Device ಎಂಬುದನ್ನು ಆಯ್ಕೆ ಮಾಡಿ ಡಿವೈಸ್ ಫೀಚರ್ ಅನುಸರಿಸಬಹುದಾಗಿದೆ.

ಇದನ್ನೂ ಓದಿ.. ಬೆಂಗಳೂರಿನಲ್ಲಿ ಕುಸಿದ ಬೃಹತ್ ಕಟ್ಟಡ; ಭಯಾನಕ ದೃಶ್ಯ 

 

Related posts