RSSನ್ನು, ಮೋದಿಯನ್ನು ಹಾಡಿ ಹೊಗಳಿದರೇ ದಿಗ್ವಿಜಯ್; X ಪೋಸ್ಟ್ ಸೃಷ್ಟಿಸಿದ ಕುತೂಹಲ

ನವದೆಹಲಿ: ಆರೆಸ್ಸೆಸ್ ಸಂಘಟನೆ ಬಗ್ಗೆ ಕಿಡಿ ಕಾರುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಇತ್ತೀಚಿನ ದಿನಗಳಲ್ಲಿ ಸಂಘವನ್ನು ಹಾಡಿ ಹೊಗಳಿದ ಸನ್ನಿವೇಶ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದವು. ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರದ್ದು.

ದಿಗ್ವಿಜಯ ಸಿಂಗ್ ಅವರದ್ದು ಎನ್ನಲಾದ X ಖಾತೆಯಲ್ಲಿ ಆರೆಸ್ಸೆಸ್ ಸಂಘಟನೆಯನ್ನು ಪ್ರಶಂಸಿಸಿ ಕೆಲವು ಸಾಲುಗಳನ್ನು ಬರೆಯಲಾಗಿದೆ. ಬಿಜೆಪಿ ಹಿರಿಯ ನಾಯಕರುಳ್ಳ ಹಳೆಯ ಫೋಟೋವನ್ನು ಟ್ಯಾಗ್ ಮಾಡಲಾಗಿರುವ ಈ ಪೋಸ್ಟನ್ನು ಉಲ್ಲೇಖಿಸಿ ಸುದ್ಧಿ ಸಂಸ್ಥೆಗಳು ವರದಿ ಮಾಡಿ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಚರ್ಚೆಗೆ ಮುನ್ನುಡಿ ಬರೆದಿವೆ.
“ಈ ಚಿತ್ರವನ್ನು ನಾನು Quora ಸೈಟ್‌ನಲ್ಲಿ ಕಂಡುಕೊಂಡೆ. ಇದು ತುಂಬಾ ಪ್ರಭಾವ ಬೀರುವಂತಿದೆ. RSSನ ತಳಮಟ್ಟದ ಸ್ವಯಂಸೇವಕ ಮತ್ತು ಜನಸಂಘ, ಬಿಜೆಪಿ ಕಾರ್ಯಕರ್ತ, ತಮ್ಮ ಸಂಘಟನೆಯ ನಾಯಕರ ಎದುರಲ್ಲಿ ಕೆಳಗೆ ಕುಳಿತು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಯಾದರು. ಇದು ಸಂಘಟನೆಯ ಶಕ್ತಿ. ಜೈ ಸಿಯಾ ರಾಮ್” ಎಂದು ಆ ಟ್ವೀಟ್ ನಲ್ಲಿ ಬರೆಯಲಾಗಿದೆ.

Related posts