ಕೇಪುಳ ಹೂವಿನ ತಂಬುಳಿ ಬಗ್ಗೆ ನಿಮಗೆ ಗೊತ್ತಾ?

ಕೇಪುಳ ಹೂವಿನ ತಂಬುಳಿ ಬಗ್ಗೆ ನಿಮಗೆ ಗೊತ್ತಾ? ಅದನ್ನು ಮಾಡುವ ವಿಧಾನ () ಗೊತ್ತಾ? ಈ ತಂಬುಳಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದ್ದು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನೊಳಗೊಂಡಿದೆ. ಇವುಗಳ ಸೇವನೆಯಿಂದ ಬಿಸಿಲ ಬೇಗೆಗೆ ದೇಹ ತಂಪಾಗುವ ಜೊತೆಗೆ ಜೀರ್ಣಶಕ್ತಿಯೂ ಹೆಚ್ಚುತ್ತದೆ.

ಬೇಕಾದ ಸಾಮಾಗ್ರಿ

 • ತೆಂಗಿನತುರಿ 1 ಕಪ್
 • ಜೀರ 1 ಚಮಚ
 • ಹಸಿಮೆಣಸು 1
 • ಕೇಪುಳ ಹೂ 2 ಕಪ್
 • ಮಜ್ಜಿಗೆ ಅಥವಾ ಮೊಸರು 1 ಕಪ್
 • ಎಣ್ಣೆ 2 ಚಮಚ
 • ಬೆಳ್ಳುಳ್ಳಿ 4 (ಬೇಕಾದಲ್ಲಿ)
 • ಕೆಂಪು ಮೆಣಸು 1
 • ಸಾಸಿವೆ 1 s
 • ಕರಿಬೇವು
 • ಉಪ್ಪು ರುಚಿಗೆ ತಕ್ಕಸ್ಟು

ಮಾಡುವ ವಿಧಾನ

 • ಮೊದಲಿಗೆ ಕೇಪುಳ ಹೂವುವನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ.
 • ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ, ಹಸಿಮೆಣಸು, ಬೇಯಿಸಿದ ಕೇಪುಳ ಹೂವು, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಜ್ಜಿಗೆ ಅಥವ ಮೊಸರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
 • ಒಂದು ಚಿಕ್ಕ ಬಾಣಲೆಯಲ್ಲಿ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ತಂಬುಳಿಗೆ ಸೇರಿಸಿದರೆ ರುಚಿಯಾದ ಕೇಪುಳ ಹೂವಿನ ತಂಬುಳಿ ಸಿದ್ಧವಾಗುತ್ತದೆ. ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಊಟದ ಜೊತೆ ಸವಿಯಬಹುದು.

ಇದನ್ನೂ ಓದಿ.. ‘ಕಲ್ಲಂಗಡಿ ತೊಗಟೆಯ ಹಲ್ವ’ ಸ್ವಾದಿಷ್ಟ ತಿಂಡಿ

 

Related posts