ಸಿಲಿಕಾನ್ ಸಿಟಿ ರೆಡ್ ಝೋನ್’ಗಳಲ್ಲಿ ಲಾಕ್’ಡೌನ್ ಮತ್ತಷ್ಟು ಬಿಗಿ

ಬೆಂಗಳೂರು: ದೇಶದಲ್ಲಿ ಕೊರೋನಾ ವೈರಾಣು ಆರ್ಭಟ ನಿಂತಿಲ್ಲ. ಹಾಗಾಗಿ ಭಾನುವಾರ ಅಂತ್ಯಗೊಳ್ಳಬೇಕಾದ ಲಾಕ್’ಡೌನ್ ಮತ್ತೆ ಎರಡು ವಾರಕಾಲ ವಿಸ್ತಾರವಾಗಿದೆ.

ಇದೆ ವೇಳೆ ಕೋವಿಡ್-೧೯ ಸೋಂಕಿನ ಪ್ರಕರಣಗಳಿಗನುಗುಣವಾಗಿ ವಲಯಗಳಾಗಿ ಜಿಲ್ಲೆಗಳನ್ನು ವಿಂಗಡಣೆ ಮಾಡಲಾಗಿದೆ. ದೇಶಾದ್ಯಂತ 733 ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ಎಂಬ 3 ವಲಯಗಳನ್ನಾಗಿ ಪಟ್ಟಿ ಮಾಡಿದ್ದು, ಆರೆಂಜ್ ಹಾಗೂ ಗ್ರೀನ್ ಝೋನ್’ಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಪರಿಸರಕ್ಕೆ ತಕ್ಕಂತೆ ಸಡಿಲಿಸಲಾಗಿದೆ.

ಇದನ್ನೂ ಓದಿ.. ಕೊರೋನಾ ಸಂಕಷ್ಟಕ್ಕೆ ಸಿದ್ದು ಶಿಷ್ಯರಂಥವರೇ ಕಾರಣ

ಬೆಂಗಳೂರು ನಗರ , ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳು ರೆಡ್ ಝೋನ್’ನಲ್ಲಿವೆ. ಇದೆ ವೇಳೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿರುವ 15 ವಾರ್ಡ್’ಗಳನ್ನು ರೆಡ್ ಝೋನ್ ಪಟ್ಟಿಗೆ ಸೇರಿಸಲಾಗಿದೆ. ಈ ವಾರ್ಡ್’ಗಳಲ್ಲಿ ಲಾಕ್’ಡೌನ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ.

ಬೆಂಗಳೂರಿನ ರೆಡ್ ಝೋನ್ ವಾರ್ಡ್​ಗಳ ಪಟ್ಟಿ ಹೀಗಿದೆ.

 • ಯಶವಂತಪುರ (ವಾರ್ಡ್ ನಂ-37)
 • ಹಗದೂರು (ವಾರ್ಡ್ ನಂ-84)
 • ವಸಂತನಗರ (ವಾರ್ಡ್ ನಂ-93)
 • ಧರ್ಮರಾಯಸ್ವಾಮಿ ದೇವಸ್ಥಾನ (ವಾರ್ಡ್ ನಂ-119)
 • ಹಂಪಿನಗರ (ವಾರ್ಡ್ ನಂ-133)
 • ಬಾಪೂಜಿನಗರ (ವಾರ್ಡ್ ನಂ-134)
 • ಪಾದರಾಯನಪುರ (ವಾರ್ಡ್ ನಂ-135)
 • ಜಗಜೀವನರಾಮನಗರ (ವಾರ್ಡ್ ನಂ-136)
 • ಕೆ.ಆರ್.ಮಾರ್ಕೆಟ್ (ವಾರ್ಡ್ ನಂ-139)
 • ಚಾಮರಾಜಪೇಟೆ (ವಾರ್ಡ್ ನಂ-140)
 • ಹೊಂಬೇಗೌಡನಗರ (ವಾರ್ಡ್ ನಂ-145)
 • ದೀಪಾಂಜಲಿನಗರ (ವಾರ್ಡ್ ನಂ-158)
 • ಜಯನಗರ ಪೂರ್ವ (ವಾರ್ಡ್ ನಂ-170)
 • ಹೊಂಗಸಂದ್ರ (ವಾರ್ಡ್ ನಂ-189).

ಇದನ್ನೂ ಓದಿ.. ಕೆಲವೆಡೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ 

 

Related posts