ಬೆಂಗಳೂರು: ರಾಜಧಾನಿ ನಗರಿ ಜನರ ಹೆಮ್ಮೆಯ ಸಾರಿಗೆ ಸಂಸ್ಥೆ ‘ಬಿಎಂಟಿಸಿ’ಗೆ ಇದೀಗ ರಜತ ಮಹೋತ್ಸವ ಸಂಭ್ರಮ.. ನಿಗಮದ ನೌಕರ ವೃಂದದಲ್ಲೂ ಎಂದಿಲ್ಲದ ಸಡಗರ. ಇದೇ ಸಂದರ್ಭದಲ್ಲಿ ನಡೆದ ಅನನ್ಯ ಕ್ರೀಡಾಕೂಟ ಈ ಸಂಭ್ರಮೋತ್ಸಾಹವನ್ನು ನೂರ್ಮಡಿಗೊಳಿಸಿತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ BGS ಕ್ರೀಡಾoಗಣ ಬೆಂಗಳೂರಿನಲ್ಲಿ ಆಗಸ್ಟ್ 2 ಮತ್ತು 3ರಂದು ವಿಶೇಷ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಧಿಕಾರಿಗಳು, ನೌಕರರು ಒಗ್ಗೂಡಿ ಆಡಿದ ಸ್ಪರ್ಧೆಗಳು ಸಾಮರಸ್ಯದ ಕ್ಷಣಗಳಿಗೆ ಸಾಕ್ಷಿಯಂತಿತ್ತು. ಅಧಿಕಾರಿಗಳು, ನೌಕರರಷ್ಟೇ ಅಲ್ಲ, ಸ್ವತಃ ಸಾರಿಗೆ ಸಚಿವರೂ ಈ ಅನನ್ಯ ಹಾಗೂ ಅಪೂರ್ವ ಸನ್ನಿವೇಶವನ್ನು ಸಾಕ್ಷೀಕರಿಸಿದರು. 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಕೆಳಗಿನವರ ವರ್ಗದಲ್ಲಿ ಕ್ರೀಡಾಕೂಟ: ಮಹಿಳೆಯರಿಗೆ ಖೋ ಖೋ, ಥ್ರೋ ಬಾಲ್ ಹಾಗೂ 75 ಮೀಟರ್ ಓಟದ ಸ್ಪರ್ಧೆ ಮತ್ತು ಪುರುಷ ವಿಭಾಗದಲ್ಲಿ ಕಬಡ್ಡಿ, ಕ್ರಿಕೆಟ್, 100…