ಮೈಸೂರು: ಜಗದ್ವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಿ ಸಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಕೂಡಾ ಅರಮನೆ ಆವರಣದಲ್ಲಿ ಗಮನಸೆಳೆಯುತ್ತಿದೆ. ಈ ನಡುವೆ, ಶುಕ್ರವಾರ ಎರಡು ಆನೆಗಳು ಅರಮನೆಯ ಆವರಣದಿಂದ ಏಕಾಏಕಿ ಹೊರನಡೆದು ಆತಂಕ ಸೃಷ್ಟಿಸಿತು. ದಸರಾ ಗಜಪಡೆಯ ಕಂಜನ್ ಹಾಗೂ ಧನಂಜಯ ಆನೆ ನಡುವೆ ಊಟದ ಸಮಯದಲ್ಲಿ ಗಲಾಟೆ ನಡೆದಿದೆ. ಧನಂಜಯ ಆನೆಯಿ ಕಂಜನ್ ಆನೆ ಮೇಲೆ ದಾಳಿಗೆ ಮುಂದಾಗಿದೆ. ಬೆದರಿದ ಕಂಜನ್ ಆನೆ ಓಡಲಾರಂಭಿಸಿದೆ. ಅದನ್ನು ಕಂಡ ಧನಂಜಯ ಆನೆ ಕಂಜನ್ ಆನೆಯನ್ನು ಬನ್ನಟ್ಟಿದೆ. ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿ ಜನರಿದ್ದ ಸ್ಥಳಕ್ಕೆ ಧಾವಿಸಿದೆ. ಅದಾಗಲೇ ಮಾವುತ ಧನಂಜಯನನ್ನು ನಿಯಂತ್ರಣ ಮಾಡಿದ್ದಾನೆ. ಬಳಿಕ ಕಂಜನ್ ಆನೆಯನ್ನು ಅರಮನೆ ಆವರಣಕ್ಕೆ ಕರೆ ತರಲಾಗಿದೆ.
Tag: Famous Temple Near Mysore
ಮಾದಪ್ಪನ ಸನ್ನಿಧಿಗೆ ಭಕ್ತರ ಹೊಳೆ; ಹುಂಡಿಯಲ್ಲಿ ಬರೋಬ್ಬರಿ 2.38 ಕೋ.ರೂ. ಸಂಗ್ರಹ
ಚಾಮರಾಜನಗರ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ಹನೂರುತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಕ್ತರಿಂದ ಕೊಟ್ಯಾನ್ತರ ರೂಪಾಯಿ ಕಾಣಿಕೆ ಹರಿದುಬರುತ್ತಿದೆ. ಶುಕ್ರವಾರ ಕ್ಷೇತ್ರದಲ್ಲಿ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.38 ಕೋಟಿ ರೂಪಾಯಿ ಸಂಗ್ರಹವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಿಗ್ಗೆ ಸಾಲೂರು ಬೃಹನ್ಮಠಾಧ್ಯಕ್ಷ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್ ನಲ್ಲಿ ಎಣಿಕೆ ಮಾಡಲಾಯಿತು. ಈ ಬಾರಿ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಕಳೆದ 36 ದಿನಗಳ ಅವಧಿಯಲ್ಲಿ 2 ಕೋಟಿ 38 ಲಕ್ಷದ 43 ಸಾವಿರದ 177 ರೂಪಾಯಿ ಹಣ, 63 ಗ್ರಾಂ ಚಿನ್ನ ಹಾಗೂ 3.173 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಾಲಯದ ಅಧಿಕಾರಿಗಳು…