ಬೆಂಗಳೂರು: ಬೇಸಗೆ ರಜೆಯ ಸಂದರ್ಭದಲ್ಲಿ ದೂರದ ಊರಿಲಿಗಳಿಗೆ ಪ್ರವಾಸ ತೆರಳುವ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೀಡಿರುವ ಹೇಳಿಕೆ ಗಮನಸೆಳೆದಿದೆ. ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಎಚ್ಚರ ಅಗತ್ಯ ಎಂದವರು ಪ್ರತಿಪಾದಿಸಿದ್ದಾರೆ ದೂರದ ವೂರುಗಳಿಗೆ ಪ್ರವಾಸ ತೆರಳಿಲುವ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿದರೂ ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕಿದೆ ಎಂದು ದಯಾನಂದ್ ಸೂಚನೆ ನೀಡಿದ್ದಾರೆ. ಪ್ರವಾಸ ತೆರಳುವ ಬೆಳೆಬಾಳುವ ವಸ್ತುಗಳನ್ನು ಬ್ಯಾಂಕಿನಲ್ಲಿ ಅಥವಾ ಲಾಕರ್‌ಗಳಲ್ಲಿ ಇಡುವುದು ಸೂಕ್ತ. ಜೊತೆಗೆ ಹೆಚ್ಚು ದಿನ ಪ್ರವಾಸ ಹೋಗುವುದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಪೊಲೀಸರು ಗಸ್ತು ಹೆಚ್ಚಿಸುವುದಲ್ಲದೆ, ಕಣ್ಗಾವಲು ಹಾಕಲಾಗುವುದು ಎಂದು ಹೇಳಿದ್ದಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು, ಬೀಗದ ಕೀಯನ್ನು ಮನೆ ಪಕ್ಕದಲ್ಲಿ ಇಟ್ಟು ಹೋಗುವ ಅಭ್ಯಾಸ ಬೇಡ ಎಂದವರು ಹೇಳಿದ್ದಾರೆ.
Tag: IPS Officer B.Dayanad
ಕನ್ನಡಿಗರ ಮನಗೆದ್ದ ಕಮೀಷನರ್ ದಯಾನಂದ್; ಕನ್ನಡದಲ್ಲಿ ಗೌರವ ವಂದನೆಗೆ ಮುನ್ನುಡಿ ಬರೆದ ಐಪಿಎಸ್ ಅಧಿಕಾರಿಗೆ ಅಭಿನಂದನೆಗಳ ಸುರಿಮಳೆ
ಬೆಂಗಳೂರು: ಕ್ರಿಯಾಶೀಲ ಕ್ರಮಗಳ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುವ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಬಿ.ದಯಾನಂದ್ ಇದೀಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕನ್ನಡಿಗರ ಮನ ಗೆದ್ದಿದ್ದಾರೆ. ಪೊಲೀಸ್ ಇಲಾಖೆಯ ‘ಶಿಸ್ತಿನ ಮಂತ್ರ’ವನ್ನು ಕನ್ನಡದಲ್ಲಿ ಪ್ರಯೋಗಿಸುವ ಮೂಲಕ ಬೆಂಗಳೂರು ಕಮೀಷನರೇಟ್ ರಾಜ್ಯದ ಗಮನೆಳೆದಿದೆ. ಈ ವಿಚಾರದಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ. ಇವರ ಈ ಕ್ರಮಕ್ಕೆ ಕನ್ನಡಾಭಿಮಾನಿಗಳಿಂದ ಅಭಿನಂದನೆಯ ಮಹಾಮಳೆಯಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ, ಇಲಾಖೆಯ ಕಾರ್ಯವೈಖರಿಗೆ ಚುರುಕು ನೀಡಿರುವ ಬಿ.ದಯಾನಂದ್ ಅವರು, ಪಿಎಸ್ಐ ವರ್ಗಾವಣೆ ವಿಚಾದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಸಿಗದ ರೀತಿ ನಿಯಮ ಜಾರಿಗೆ ತಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ ರಾಜಧಾನಿ ಪೊಲೀಸರ ಶಕ್ತಿಸ್ಥಳ ಆಗಿರುವ ಆಯುಕ್ತರ ಕಚೇರಿಯಲ್ಲಿ ಕನ್ನಡ ಮಂತ್ರ ಪಠಿಸಲಾಗುತ್ತದೆ. ಆಯುಕ್ತರ ಕಚೇರಿಯಲ್ಲಿ ಕನ್ನಡದಲ್ಲಿ ಗೌರವ ವಂದನೆ ನೀಡಲಾಗುತ್ತಿದೆ. ಈ…