ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 1,438 ಸೋಂಕು ಪತ್ತೆ

ಚೆನ್ನೈ: ದೇಶಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ 1,438 ಸೋಂಕು ಪ್ರಕರಣಗಳು ವರದಿಯಾಗಿವೆ. ಅಷ್ಟೇ ಅಲ್ಲ ಆ 24 ಗಂಟೆಯಲ್ಲೇ 12 ರೋಗಿಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಕ್ಷಿಣ ಭಾರತದಲ್ಲಿ ಆತಂಕಕಾರಿ ಎಂಬಂತೆ ಗೋಚರಿಸುತ್ತಿತ್ತು. ಆದರೆ ಕೆಲ ದಿನಗಳ ವರದಿ ಗಮನಿಸಿದಾಗ ಪರಿಸ್ಥಿತಿ ಚೇತರಿಕೆಯ ವಿಶ್ವಾಸ ವ್ಯಕ್ತವಾಗಿತ್ತು. ಆದರೆ ಶುಕ್ರವಾರ ಒಂದೇ ದಿನ 1,438 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ತಮಿಳುನಾಡು ಕೂಡಾ ಸೇಫ್ ಅಲ್ಲ ಎಂಬಂತಾಗಿದೆ.

ತಮಿಳುನಾಡು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 28,694ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 15,762 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ.. ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್

Related posts