ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಗ್ಗೂಡಬೇಕಿದೆ; ಇರಾನ್ ಕರೆ

ರಿಯಾದ್ (ಸೌದಿ ): ಮಧ್ಯಪ್ರಾಚ್ಯ ಬಿಕ್ಕಟ್ಟು ಇದೀಗ ವಿಶ್ವದ ಹಲವು ರಾಷ್ಟ್ರಗಳನ್ನು ಕೆರಳುವಂತೆ ಮಾಡಿದೆ. ಪ್ಯಾಲೆಸ್ತೀನ್ ದಾಳಿಗೆ ಪ್ರತೀಕಾರ ತೀರಿಸುತ್ತಿರುವ ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಮುಗಿಬಿದ್ದಿವೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಸಮರ ತೀವ್ರಗೊಂಡಿದ್ದು ಭೀಕರ ನರಮೇಧಕ್ಕೆ ಸಾಕ್ಷಿಯಾಗುತ್ತಿದೆ. ಈ ಯುದ್ಧದಲ್ಲಿ ಇಸ್ರೇಲ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅಚ್ಚರಿಯ ಸಂದೇಶ ನೀಡಿದ್ದಾರೆ. ಸೌದಿ ರಾಜಧಾನಿ ರಿಯಾದ್‌ನಲ್ಲಿ ಶನಿವಾರ ನಡೆದ ಅರಬ್ ಮತ್ತು ಮುಸ್ಲಿಂ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ರೈಸಿ, ಇಸ್ರೇಲ್ ಸೇನೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವಂತೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಕರೆ ನೀಡಿದ್ದು, ಇಸ್ರೇಲ್‌ನೊಂದಿಗೆ ಸಂಬಂಧವನ್ನು ಇಸ್ಲಾಮಿಕ್ ದೇಶಗಳು ಮುರಿಯಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡಿ ಪ್ಯಾಲೆಸ್ಟೀನನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷ; ಹಮಾಸ್’ನಿಂದ ಇಸ್ರೇಲ್ ಒತ್ತೆಯಾಳುಗಳ ನರಮೇಧದ ಬೆದರಿಕೆ

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಿಂದಾಗಿ ಮಧ್ಯ ಪ್ರಾಚ್ಯ ಪ್ರಕ್ಷುಬ್ಧಗೊಂಡಿದೆ. ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರರ ಪೈಶಾಚಿಕ ದಾಳಿಗೆ ಪ್ರತಿಯಾಗಿ ಮಿಲಿಟರಿ ಕಾರ್ಯಾಚರಣೆಗೆ ಇಸ್ರೇಲ್ ತಯಾರಿ ನಡೆಸಿದೆ. ಸುಮಾರು ಮೂರು ಲಕ್ಷ ಸೈನಿಕರ ಪದೇ ಇಸ್ರೇಲ್ ಬೆಂಬಲಿಸಿ ಸಮರದ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಇದೇ ವೇಳೆ, ಇಸ್ರೇಲ್ ದಾಳಿ ನಡೆಸಿದರೆ ತಮ್ಮ ಮೊಟ್ಟೆಯಲ್ಲಿರುವ ಮಂದಿಯ ನರಮೇಧ ನಡೆಸುವ ಎಚ್ಚರಿಕೆಯನ್ನು ಹಮಾಸ್ ನೀಡಿದೆ. ಗಾಜಾ ಪಟ್ಟಿಯಲ್ಲಿ ನಾಗರಿಕರ ಮೇಲೆ ದಾಳಿ ನಡೆದರೆ ತಮ್ಮ ವಶದಲ್ಲಿರುವ ಇಸ್ರೇಲಿ ನಾಗರಿಕರನ್ನು ಕೊಲ್ಲುತ್ತೇವೆ ಎಂದು ಹಮಾಸ್ ಉಗ್ರರು ಬೆದರಿಕೆ ಹಾಕಿದ್ದಾರೆ. ಈ ನಡುವೆ, ಮಧ್ಯಪ್ರಾಚ್ಯ ಸಮರದಲ್ಲಿ ಈವರೆಗೆ 1,600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. 143 ಮಕ್ಕಳು ಮತ್ತು 105 ಮಹಿಳೆಯರು ಸೇರಿದಂತೆ 704 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಹಮಾಸ್ ಉಗ್ರರ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಸುಮಾರು 900 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಗಾಜಾ ಕದನ: ಇಸ್ರೇಲ್ ನೆರವಿಗೆ ಧಾವಿಸಿದ ಅಮೆರಿಕಾ; ಯುದ್ಧ ನೌಕೆಗಳ ರವಾನೆ

ಗಾಜಾ: ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮರದಿಂದಾಗಿ ಗಾಜಾ ಪಟ್ಟಿ ಪ್ರಕ್ಷುಬ್ಧಗೊಂಡಿದೆ. ಗಾಜಾ ಪಟ್ಟಿ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಇದೇ ವೇಳೆ ಉಗ್ರರ ನಡೆ ಬಗ್ಗೆ ಕುಪಿತವಾಗಿರುವ ಅಮೆರಿಕಾ ರಾಷ್ಟ್ರವು ಇಸ್ರೇಲ್’ನ ನೆರವಿಗೆ ಧಾವಿಸಿದ್ದು ಸಮರ ನೌಕೆಗಳನ್ನು ಕಳುಹಿಸಿಕೊಟ್ಟಿದೆ. ಗಾಜಾ ಪಟ್ಟಿ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೊಲೀಸರು ಸೇರಿದಂತೆ 2,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇದೀಗ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಅಮೆರಿಕವು ಇಸ್ರೇಲ್​ ಸೈನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಯುದ್ಧ ನೌಕೆಯನ್ನು ಕಳುಹಿಸಿದೆ. ಮೆಡಿಟರೇನಿಯನ್ ಸಮುದ್ರಕ್ಕೆ ಯುದ್ಧ ಹಡಗುಗಳನ್ನು ಕಳುಹಿಸಿದೆ.

ಇಸ್ರೇಲ್-ಪ್ಯಾಲೆಸ್ತೀನ್ ಸಮರ; ಯಹೂದಿಗಳ ಶತ್ರು ರಾಷ್ಟ್ರ ಇರಾನ್ ಸಂಭ್ರಮಾಚರಣೆ

ಗಾಜಾಪಟ್ಟಿ ಮತ್ತೊಮ್ಮೆ ಉದ್ವಿಗ್ನಗೊಂಡಿದ್ದು ಹಮಾಸ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿರುವ ಪ್ರತಿಕಾರ್ಯಾಚರಣೆಯಲ್ಲಿ ಪ್ಯಾಲೆಸ್ತೀನ್ ತತ್ತರಗೊಂಡಿದೆ. ಶನಿವಾರದಿಂದ ಇಸ್ರೇಲ್ ಸತತ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ, ಪ್ಯಾಲೆಸ್ತೀನ್ ಬಂಡೂಕೋರರು ನಡೆಸಿದ ದಾಳಿಯಲ್ಲಿ ಸುಮಾರು ೩೦೦ ಮಂದಿ ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿ ಬಳಿಕ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ರಾತ್ರಿಯಿಡೀ ನಡೆದಿದೆ. ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಸುಮಾರು 20 ನಿಮಿಷಗಳಲ್ಲಿ 5000 ರಾಕೆಟ್​ಗಳನ್ನು ಹಾರಿಸಿದೆ. ಈ ದಾಳಿ ಭಾರೀ ಸಾವು-ನೋವಿಗೆ ಕಾರಣವಾಗಿದೆ. ಈ ನಡುವೆ, ಹಮಾಸ್ ಉಗ್ರಗ್ರಾಮಿ ಸಂಘಟನೆ ನಡೆಸಿದ ದಾಳಿಗೆ ಇಸ್ರೇಲ್​ನ ಶತ್ರು ರಾಷ್ಟ್ರ ಇರಾನ್ ಸಂಭ್ರಮಿಸಿದೆ. ಇರಾನ್ ಸೇನೆ ಹಾಗೂ ಬೆಂಬಲಿಗರು ತಮ್ಮ ನಾಡಿನಲ್ಲಿ ಸಂಭ್ರಮಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. This is not Gaza or Palestine, this is Toronto Canada #Israel #hamas #Lebanon#IsraelPalestineWar pic.twitter.com/GNoKFVfdHD…

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ಗಾಜಾ ಪಟ್ಟಿ ಉದ್ವಿಗ್ನ

ಗಾಜಾಪಟ್ಟಿ ಮತ್ತೊಮ್ಮೆ ಉದ್ವಿಗ್ನಗೊಂಡಿದ್ದು ಹಮಾಸ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿರುವ ಪ್ರತಿಕಾರ್ಯಾಚರಣೆಯಲ್ಲಿ ಪ್ಯಾಲೆಸ್ತೀನ್ ತತ್ತರಗೊಂಡಿದೆ. ಶನಿವಾರದಿಂದ ಇಸ್ರೇಲ್ ಸತತ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ, ಪ್ಯಾಲೆಸ್ತೀನ್ ಬಂಡೂಕೋರರು ನಡೆಸಿದ ದಾಳಿಯಲ್ಲಿ ಸುಮಾರು 300 ಮಂದಿ ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ. https://twitter.com/Rj_Updates_07/status/1710845210245333189 ಹಮಾಸ್ ದಾಳಿ ಬಳಿಕ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ರಾತ್ರಿಯಿಡೀ ನಡೆದಿದೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಈ ಸಮರದಲ್ಲಿ 1750 ಇಸ್ರೇಲಿ ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ಮೇಲೆ ಸುಮಾರು 20 ನಿಮಿಷಗಳಲ್ಲಿ 5000 ರಾಕೆಟ್​ಗಳನ್ನು ಪ್ಯಾಲೆಸ್ತೀನ್ ಹಾರಿಸಿದೆ. ಈ ದಾಳಿ ಭಾರೀ ಸಾವು-ನೋವಿಗೆ ಕಾರಣವಾಗಿದೆ. Rockets fired from Gaza Towards Israel#Gaza #IsraelPalestineWar pic.twitter.com/TNwIrIZMqj — Ex Bhakt (नेशनलिस्ट) (@Ex_Bhakts) October 8, 2023