ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ಗಾಜಾ ಪಟ್ಟಿ ಉದ್ವಿಗ್ನ

ಗಾಜಾಪಟ್ಟಿ ಮತ್ತೊಮ್ಮೆ ಉದ್ವಿಗ್ನಗೊಂಡಿದ್ದು ಹಮಾಸ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿರುವ ಪ್ರತಿಕಾರ್ಯಾಚರಣೆಯಲ್ಲಿ ಪ್ಯಾಲೆಸ್ತೀನ್ ತತ್ತರಗೊಂಡಿದೆ. ಶನಿವಾರದಿಂದ ಇಸ್ರೇಲ್ ಸತತ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ, ಪ್ಯಾಲೆಸ್ತೀನ್ ಬಂಡೂಕೋರರು ನಡೆಸಿದ ದಾಳಿಯಲ್ಲಿ ಸುಮಾರು 300 ಮಂದಿ ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ.

https://twitter.com/Rj_Updates_07/status/1710845210245333189

ಹಮಾಸ್ ದಾಳಿ ಬಳಿಕ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ರಾತ್ರಿಯಿಡೀ ನಡೆದಿದೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಈ ಸಮರದಲ್ಲಿ 1750 ಇಸ್ರೇಲಿ ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ಮೇಲೆ ಸುಮಾರು 20 ನಿಮಿಷಗಳಲ್ಲಿ 5000 ರಾಕೆಟ್​ಗಳನ್ನು ಪ್ಯಾಲೆಸ್ತೀನ್ ಹಾರಿಸಿದೆ. ಈ ದಾಳಿ ಭಾರೀ ಸಾವು-ನೋವಿಗೆ ಕಾರಣವಾಗಿದೆ.

 

Related posts