ನವದೆಹಲಿ: ತನ್ನನ್ನು ಈ ಮಟ್ಟಕ್ಕೆ ಬೆಳೆಸಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜೀವನದಲ್ಲಿದೇಶಭಕ್ತಿ ಬೆಳೆಸುವಂತಾಗಿ, ತಮ್ಮನ್ನು ಪೋಷಿಸಿದ್ದಕ್ಕಾಗಿ ಸಂಘಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ AI ಸಂಶೋಧಕ ಮತ್ತು ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸಾಂಘಿಕ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ RSS ತಮ್ಮನ್ನು ಒಬ್ಬ ವ್ಯಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು. “RSS ಮೂಲಕ, ನಾನು ಉದ್ದೇಶಿತ ಜೀವನವನ್ನು ಕಂಡುಕೊಂಡೆ. ನಂತರ ಸಂತರ ನಡುವೆ ಸಮಯ ಕಳೆಯುವ ಅದೃಷ್ಟ ಸಿಕ್ಕಿತು, ಅದು ನನಗೆ ಬಲವಾದ ಆಧ್ಯಾತ್ಮಿಕ ಅಡಿಪಾಯವನ್ನು ನೀಡಿತು. ನಾನು ಶಿಸ್ತು ಮತ್ತು ಉದ್ದೇಶಿತ ಜೀವನವನ್ನು ಕಂಡುಕೊಂಡೆ” ಎಂದು ಮೋದಿ ಸಂಘದ ಜೊತೆ ಸಾಗಿಬಂದ ಅರ್ಥಪೂರ್ಣ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಕಳೆದ 100 ವರ್ಷಗಳಲ್ಲಿ RSS…