ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App

ಬೆಂಗಳೂರು: ಜಗತ್ತಿನಾದ್ಯಂತ ಕೊರೋನಾ ಹಾವಳಿ ಮುಂದುವರಿದಿದ್ದು ಲಕ್ಷಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಈಗಿನ್ನೂ ಕೋವಿಡ್-19 ಮರಣ ಮೃದಂಗವನ್ನೇ ಭಾರಿಸುತ್ತಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳ ಜನರು ಈ ವಿಚಾರದಲ್ಲಿ ಚೀನಾ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಇದೇ ವೇಳೆ ಭಾರತೀಯರೂ ಚೀನಾ ವಿರುದ್ಧ ಸಿಟ್ಟಾಗಿದ್ದು, ಆ ದೇಶದ ವಸ್ತುಗಳನ್ನು ತಿರಸ್ಕರಿಸಬೇಕೆಂಬ ಬಗ್ಗೆ ಅಭಿಯಾನವನ್ನೇ ಆರಂಭಿಸಿದ್ದಾರೆ. ಅದರಲ್ಲೂ ಜನಪ್ರಿಯ ಟಿಕ್ ಟಾಕ್ App ವಿರುದ್ಧ ಬಲವಾದ ಸಮರ ಆರಂಭಗೊಂಡಿದೆ.

ಕೆಂಪು ರಾಷ್ಟ್ರ ಚೀನಾವು ಭಾರತದ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರ ಎಂದೇ ಅನೇಕ ದಶಕಗಳಿಂದಲೂ ಗುರುತಾಗಿವೆ. ಅನೇಕ ಸಂದರ್ಭಗಳಲ್ಲಿ, ಅನೇಕ ಸನ್ನಿವೇಶಗಳಲ್ಲಿ ಭಾರತದ ವಿರುದ್ಧ ಪಿತೂರಿ ಮಾಡುತ್ತಲೇ ಇರುವ ಚೀನಾ, ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಸ್ಥಾನಮಾನ ಸಿಗುವ ವಿಚಾರವಾಗಲಿ, ಭಾರತ-ಪಾಕ್ ಗಡಿ ವಿಚಾರವಾಗಲಿ ನಮ್ಮ ಎದುರಾಳಿಯಾಗಿ ನಿಲುವು ತಾಳುತ್ತಲಿದೆ. ಭಾರತದ ಗಡಿಯಾಚೆಗೆ ಬಂದು ಆಗಾಗ್ಗೆ ಜಗಳ ತೆಗೆಯುತ್ತಿರುವ ಚೀನಾ ಪ್ರಸ್ತುತ ಕೊರೋನಾ ವಿಚಾರದಲ್ಲೂ ಭಾರತದ ಸಹನೆಯನ್ನು ಕೆಣಕುತ್ತಲಿದೆ.

ಇದನ್ನೂ ಓದಿ.. ಶಾಸಕ ರಾಜೇಶ್ ನಾಯ್ಕ್’ಗೆ ಅಭಿನಂದನೆಗಳ ಮಹಾಪೂರ

ಇದೇ ವೇಳೆ ಚೀನಾದ ವಸ್ತುಗಳನ್ನು ತಿರಸ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿರುವುದು ಕುತೂಹಲಕಾರಿ ಬೆಳವಣಿಗೆ. ಅದರಲ್ಲೂ ಚೀನಾ ಮೂಲದ ಕಂಪೆನಿಯ ‘ಟಿಕ್ ಟಾಕ್’ ವಿರುದ್ಧ ಜನ ದೊಡ್ಡಮಟ್ಟದ ರಹಸ್ಯ ಸಮರ ಸಾಗಿದೆ. ಟಿಕ್ ಟಾಕ್ Appನ್ನು ತಿರಸ್ಕರಿಸೋಣ ಎಂಬ ಅಭಿಯಾನ ತಿಂಗಳ ಹಿಂದೆಯೇ ಆರಂಭವಾಗಿತ್ತು. ಆದರೆ ಟಿಕ್ ಟಾಕ್’ಗೆ ಪರ್ಯಾಯ App ಇಲ್ಲದೆ ಇದ್ದುದರಿಂದ ಈ ಅಭಿಯಾನಕ್ಕೆ ಜನ ಹೆಚ್ಚಿನ ಮಹತ್ವ ನೀಡಿಲ್ಲ.

ಇದನ್ನೂ ಓದಿ.. ಕೊರೋನಾ ವಿಚಾರದಲ್ಲೂ ಮೋದಿ ‘ರಣವಿಕ್ರಮ’: ಮತ್ತೊಂದು ಖ್ಯಾತಿಯ ಕಿರೀಟ

ಇದೀಗ ಟಿಕ್ ಟಾಕ್’ಗೆ ಪರ್ಯಾಯವಾಗಿ ‘ಮಿತ್ರಾನ್’ (MITRAN) ಎಂಬ App ಭಾರತೀಯರ ಮೊಬೈಲ್’ಗಳಲ್ಲಿ ಜಾಗ ಪಡೆಯಲಾರಂಭಿಸಿದೆ. ಭಾರತೀಯರೇ ಸಿದ್ಧಪಡಿಸಿರುವ ‘MITRAN’ ಟಿಕ್ ಟಾಕ್ ಗಿಂತ ಕಡಿಮೆ ಸೈಜ್ ಹೊಂದಿದ್ದು, ಬಳಕೆ ಕೂಡಾ ಸುಲಭ.

‘ಮಿತ್ರಾನ್’ App ಬಗ್ಗೆ ಪ್ರಚಾರ ಸಾಗಿದ್ದು ಈಗಾಗಲೇ ಲಕ್ಷಾಂತರ ಜನ ಡೌನ್’ಲೋಡ್ ಮಾಡಿ ಅದರ ಕ್ರಿಯಾ ಕೌಶಲ್ಯವನ್ನು ನೆಚ್ಚಿಕೊಂಡಿದ್ದಾರೆ.

ಭಾರತವು ತನ್ನದೇ ಆದ ಟಿಕ್‌ಟಾಕ್ ಆವೃತ್ತಿಯನ್ನು ‘ಮಿತ್ರಾನ್’ ಹೆಸರಿನಲ್ಲಿ ಹೊರತಂದಿರುವುದು ತಂತ್ರಜ್ಞಾನದ ಹೊಸತನ ಎಂದೇ ಬಣ್ಣಿಸಲಾಗುತ್ತಿದೆ.  ‘ಮಿತ್ರಾನ್’ Appನ್ನು install ಮಾಡುವ ಲಿಂಕ್ ಇಲ್ಲಿದೆ..  https://play.google.com/store/apps/details?id=com.mitron.tv

ಇದನ್ನೂ ಓದಿ.. ಎಲ್ಲರಿಗೂ ಕೊರೋನಾ ಪರೀಕ್ಷೆ ಕಡ್ಡಾಯ; ನೀವೂ ಕೂಡಾ..

Related posts