ಉಡುಪಿ: ಸಮಾಜಮುಖಿ ಸ್ವಾಮೀಜಿಗಳು ಸಮಾಜಕ್ಕೆ ಕಂಟಕ ಎದುರಾದಾಗ ಸಮಸ್ಯೆ ಬಗೆಹರಿಸಲು ತಾವೇ ಆಖಾಡಕ್ಕೆ ಧುಮುಕುವುದುಂಟು. ಕೆಲವೊಮ್ಮೆ ಪವಾಡ ಮೂಲಕ ಶಿಷ್ಯ ಸಮುದಾಯವನ್ನು ಅಚ್ಚರಿಗೊಳಿಸಿದ್ದೂ ಉಂಟು. ಇಲ್ಲಿ ಪೇಜಾವರ ಶ್ರೀಗಳು ಕೂಡಾ ಮೂಕ ಪ್ರಾಣಿಯನ್ಬು ರಕ್ಷಿಸಲು ಮುಂದಾದ ಪ್ರಸಂಗ ನೋಡುಗರನ್ನು ನಿಬ್ಬೆರಗಾಗಿಸಿದೆ. ಉಡುಪಿಯ ಪೇಜಾವರ ಮಠಾಧೀಶರು ಕೃಷ್ಣ ಮಠ ಸಮೀಪದ ಬಾವಿಯೊಂದಕ್ಕೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲು ತಾವೇ ಬಾವಿಗಿಳಿದರು. ಕಾವಿ ತೊಟ್ಟಿರುವ ಶ್ರೀಗಳು ತಮ್ಮ ಕಾವಿ ವಸ್ತುವನ್ನು ಕಳಚಿ ಸರಸರನೆ ಬಾವಿಗಿಳಿದ ವೈಖರಿಯು ಅಚ್ಚರಿ ಹಾಗೂ ಕುತೂಹಲದ ಸನ್ನಿವಶಕ್ಕೆ ಕಾರಣವಾಯಿತು. ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಕಾರ್ಯಕ್ಕೂ ಸೈ, ಸಾಮಾಜಿಕ ಕಾರ್ಯಕ್ಕೂ ಸೈ ಎನಿಸಿಕೊಂಡವರು. ತಮ್ಮ ಬಿಡುವಿನ ವೇಳೆ ನೀಲಾವರದ ಗೋಶಾಲೆಯಲ್ಲಿ ಕಳೆಯುವ ಶ್ರೀಗಳಿಗೆ ಮೂಕ ಪ್ರಾಣಿಗಳ ಮೇಲೂ ಹೆಚ್ಚಿನ ಕರುಣೆ. ಮಠದ ಸಮೀಪದ ಬಾವಿಯೊಂದಕ್ಕೆ ಬೆಕ್ಕಿನ ಮರಿ ಬಿದ್ದಿತ್ರು. ಪ್ರಾಣಸಂಕಟದಲ್ಲಿದ್ದ ಮರಿಯ ಮೂಕ ವೇದನೆಯನ್ನು…
Tag: Nava Karnataka News
ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ; ನಾಗರಿಕರು ಗಮನಿಸಬೇಕಾದ ಸಂಗತಿಗಳು ಇವು..
ಬೆಂಗಳೂರು: ರಾಜ್ಯದ ಪ್ರತಿ ಮನೆಗಳಿಗೆ ಉಚಿತ ವಿದ್ಯುತ್ ಪೂರೈಸುವ ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಜಿದಾರರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಅರ್ಜಿ ಹಾಕಬಹುದು. ಆಧಾರ್ ಸಂಖ್ಯೆ, ವಿದ್ಯುತ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಗೊಂದಲ ಇದ್ರೆ ಸಹಾಯವಾಣಿ 1912ಗೆ ಕರೆ ಮಾಡಬಹುದು.ವಿದ್ಯುತ್ಶಕ್ತಿ ಕಚೇರಿಯಲ್ಲೂ ಮಾಹಿತಿ ಪಡೆಯಬಹುದು ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಬಾಡಿಗೆ ಮನೆಗೆ ಸಂಬಂಧಿಸಿದ ದಾಖಲೆ ಇರಬೇಕು. ಬಾಡಿಗೆ ಮನೆಯಲ್ಲಿ ಇರುವವರು ಉಚಿತ ವಿದ್ಯುತ್‌ಗಾಗಿ ಅಗತ್ಯ ದಾಖಲೆ ಸಲ್ಲಿಸಬೇಕು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್ ಕಚೇರಿಗಳಲ್ಲೂ ನೋಂದಾಯಿಸಬಹುದು.
ಅನ್ನಭಾಗ್ಯಕ್ಕಾಗಿ ಅಕ್ಕಿ ಹುಡುಕಾಟ; ಛತ್ತೀಸ್‌ಗಡದಲ್ಲಿ1.5 ಲಕ್ಷ ಮೆ.ಟನ್ ಲಭ್ಯ
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಸಿಎಂ, ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ಖುದ್ದಾಗಿ ಮಾತನಾಡಿದ್ದು, ಅಲ್ಲಿ ಅಕ್ಕಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದರು. ಆಂಧ್ರಪ್ರದೇಶದವರೊಂದಿಗೆ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಾತನಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿಯೇ ಅಕ್ಕಿ ಲಭ್ಯವಿದೆ. ಕಮಿಷನ್ ಆಮಿಷಕ್ಕೆ ಹೊರರಾಜ್ಯಗಳಿಂದ ಅಕ್ಕಿ ಖರೀದಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯದಲ್ಲಿಯೇ ದೊರೆಯುವುದಾದರೆ ಕೊಡಿಸಲಿ ಎಂದರು.
ಕೇಂದ್ರ ನೀಡದಿದ್ದರೂ ರಾಜ್ಯ ಸರ್ಕಾರವೇ 10 ಕೆ.ಜಿ ಅನ್ನಭಾಗ್ಯ ಅಕ್ಕಿ ನೀಡಲಿದೆಯಂತೆ
ಕೇಂದ್ರ ಸರಕಾರ ನೀಡದಿದ್ದರೂ ನಾವು 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನ ಭಾಗ್ಯ ಯೋಜನೆ ಜಾರಿ ಆಗಲಿದೆ. ಇದು ಒಕ್ಕೂಟ ವ್ಯವಸ್ಥೆ. ದೇಶದಲ್ಲಿ ಈಗಾಗಲೇ ಇರುವ ವ್ಯವಸ್ಥೆ ಹಾಗೂ ಪ್ರಕ್ರಿಯೆ ಮೂಲಕ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ದಾಸ್ತಾನು ಇದ್ದರೂ ಅಕ್ಕಿ ನೀಡಲು ನಿರಾಕರಿಸಿದ್ದಾರೆ. ಕೇಂದ್ರದ ಈ ಧೋರಣೆ ಪ್ರತಿಭಟಿಸಿ, ಜನರಿಗೆ ಅರಿವು… pic.twitter.com/wiNfobBM5i — Karnataka Congress (@INCKarnataka) June 16, 2023
ಕರಾವಳಿಯಲ್ಲಿ ಕೋಮುಧ್ವೇಷಕ್ಕೆ ಬಲಿಯಾದವರ ಕುಟುಂಬದವರಿಗೆ ತಲಾ 25 ಲಕ್ಷ ರೂ ಪರಿಹಾರ
ಬೆಂಗಳೂರು: ಮಂಗಳೂರು ಸಹಿತ ಕರಾವಳಿಯಲ್ಲಿ ಕೋಮುಧ್ವೇಷಕ್ಕೆ ಬಲಿಯಾದವರ ಕುಟುಂಬದವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ನಾಲ್ವರು ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ. ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಪ್ರಕಟಿಸಿದ್ದು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.