ವಾಟ್ಸಾಪ್ ಜಗತ್ತಿನಲ್ಲೇ ಜನಪ್ರಿಯ ಮೆಸೆಂಜರ್ ಆಗಿ ಗಮನಸೆಳೆದಿದೆ. ಆದರೆ ಇದೀಗ ವಾಟ್ಸಾಪ್’ಗಿಂತಲೂ ಉತ್ತಮ ಆಯ್ಕೆಗೆ ‘ಟೆಲಿಗ್ರಾಮ್’ ವೇದಿಕೆಯಾಗುತ್ತಿದೆ.
ವೀ ಟ್ರಾನ್’ಸ್ಫರ್ ನಿರ್ಬಂಧಿಸಲ್ಪಟ್ಟ ನಂತರ ದೈತ್ಯ ಫೈಲ್’ಗಳನ್ನು ಕಳುಹಿಸುವುದು ಪ್ರಯಾಸದ ಕೆಲಸವಾಗಿದೆ. ಇದೀಗ ಆ ಚಿಂತೆಯನ್ನು ಟೆಲಿಗ್ರಾಮ್ ದೂರ ಮಾಡಿದೆ. ಸೋಶಿಯಲ್ ಮೆಸೇಜಿಂಗ್ ಆ್ಯಪ್ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ತನ್ನ ಚಂದಾದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸಿದ್ದು, ಸಂದೇಶ ರವಾನೆಯ ಜೊತೆಗೆ 2 ಜಿಬಿ ವರೆಗಿನ ಫೈಲ್’ ಗಳನ್ನು ಕಳಿಸುವ ಅವಕಾಶ ನೀಡಿದೆ.
ಫೈಲ್ ವರ್ಗಾವಣೆ ಮಿತಿಯನ್ನು 1.5ಜಿಬಿಯಿಂದ 2 ಜಿಬಿಗಳಿಗೆ ಏರಿಕೆಮಾಡಿರುವ ಟೆಲಿಗ್ರಾಮ್, 500 ಸದಸ್ಯರಿರುವ ಗ್ರೂಪ್ ರಚನೆಗೂ ಅವಕಾಶ ನೀಡಿದೆ. ಜೊತೆಗೆ ಅನಾಮಿಕ ಖಾತೆಯಿಂದ ಬರುವ ಸಂದೇಶಗಳನ್ನು ತಡೆಯುವ ಆಯ್ಕೆಗೂ ಅವಕಾಶವಿದೆ.