ಮಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕರಾವಳಿ ತೀರದಲ್ಲಿ ಕಡಲ್ಕೊರೆತ ಆತಂಕ ಮನೆಮಾಡಿದೆ. ಉಳ್ಳಾಲ ಸಮುದ್ರ ತೀರದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮನೆಯೊಂದು ಸಮುದ್ರ ಪಾಲಾದ ಘಟನೆ ನಡೆದಿದೆ.
ಉಲ್ಲ್ಲಾಳ ಸುತ್ತಮುತ್ತಲ ಕಿಲೇರಿಯಾ ನಗರ, ಸೋಮೇಶ್ವರ, ಉಚ್ಚಿಲ, , ಮೊದಲಾದೆಡೆ ೧೦ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.
ಸೋಮೇಶ್ವರ ರುದ್ರಪಾದೆ ಸಮೀಪ ಕೆಲವು ದಿನಗಳಿಂದ ಸಮುದ್ರದ ಅಲೆ ಅಬ್ಬರ ಜೋರಾಗಿದ್ದು ಅಲೆಗಳ ಹೊಡೆತಕ್ಕೆ ಗಳಿಗೆ ತತ್ತರಿಸಿದ್ದ ಮನೆ ಬಿರುಕು ಬಿಟ್ಟಿದ್ದು ಅದು ಈಗ ಸಮುದ್ರ ಪಾಲಾಗಿದೆ.
ಕಡಲ್ಕೊರೆತ ತಡೆ ಬಗ್ಗೆ ಶಾಶ್ವತ ಕಾಮಗಾರಿ ಕೈಗೊಳ್ಳುವ ಭರವಸೆ ಸರ್ಕಾರದಿಂದ ಸಿಗುತ್ತಲೇ ಇವೆ. ಆದರೆ ಕಾಮಗಾರಿ ವಿಳಂಬವಾಗುತ್ತಿದೆ. ಹಾಗಾಗಿ ಅವಾಂತರಗಳು ಸಂಭವಿಸುತ್ತಿವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.