‘ಬ್ರಹ್ಮೋಸ್‌’ ಕ್ಷಿಪಣಿಗೆ ಪರಿಪೂರ್ಣ ಪ್ರಮಾ­ಣೀಕರಣ; ಭಾರತದ ವಾಯುಪಡೆಗೆ ಭೀಮಬಲ

ದೆಹಲಿ: ಒಂದೆಡೆ ಲಡಾಕ್ ಗಾಡಿಯಲ್ಲಿ ಚೀನಾ ರಗಳೆ, ಇನ್ನೊಂದೆಡೆ ಪಿಒಕೆಯಲ್ಲಿ ಪಾಕ್ ಪಡೆಯ ಕಿರಿಕ್.. ಈ ಆತಂಕದ ಕಾಲದಲ್ಲಿ ಭಾರತದ ರಕ್ಷಣಾ ಕ್ಷೇತ್ರಕ್ಕೆ ಭೀಮಬಲ ಸಿಕ್ಕಿದೆ.

ಭಾರತದ ವಾಯುಪಡೆಯ ಮಹತ್ವಾಕಾಂಕ್ಷೆಯ ‘ಬ್ರಹ್ಮೋಸ್‌’ ಕ್ಷಿಪಣಿಗೆ ಫ್ಲೀಟ್‌ ರಿಲೀಸ್‌ ಕ್ಲಿಯರೆನ್ಸ್ ಪ್ರಮಾ­ಣೀಕರಣ ಲಭಿಸಿದೆ. ಹಾಗಾಗಿ ಯಾವುದೇ ಯುದ್ಧ ಸನ್ನಿವೇಶಗಳಲ್ಲಿ ಈ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬಹುದಾಗಿದೆ. ಬ್ರಹ್ಮೋಸ್‌ ಪ್ರಯೋಗಿಸಲು ವಾಯುಪಡೆಗೆ ಈಗ ಹಾದಿ ಸುಗಮವಾಗಿದೆ ಎಂದು ಬ್ರಹ್ಮೋಸ್‌ ಕಾರ್ಪೊರೇಷನ್‌ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ‘ಬ್ರಹ್ಮೋಸ್‌’ ಕ್ಷಿಪಣಿ?

  • ಇಂಡೋ-ರಷ್ಯಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಇದಾಗಿದೆ. ಕಳೆದ ಡಿಸೇಂಬರ್’ನಲ್ಲಿ ಒಡಿಶಾದ ಚಂಡಿಪುರದಲ್ಲಿ ಸಂಯೋಜಿತ ಟೆಸ್ಟ್ ಶ್ರೇಣಿಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.
  • ಭಾರೀ ಪ್ರಮಾಣದ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಭೂದಾಲಿ ಆವೃತ್ತಿ ಇದಾಗಿದೆ.
  • ಸುಖೋಯ್‌- 30 ಎಂಕೆಐ ಯುದ್ಧ ವಿಮಾನದ ಮೂಲಕ ತಂಜಾವೂ­ರಿನ ಐಎಎಫ್ ವಾಯುನೆಲೆಗೆ ಜನವರಿ ತಿಂಗಳಿನಲ್ಲಿಯೇ ಸೇರ್ಪಡೆಗೊಂಡಿತ್ತು.
  • 300 ಕಿ.ಮೀ. ಗಮ್ಯದ ದಾಳಿ ಸಾಮರ್ಥ್ಯ ಈ ಕ್ಷಿಪಣಿಗಿದೆ.
  • ಸುಖೋಯ್‌- 30 ಎಂಕೆಐ ಅತ್ಯಾಧುನಿಕ ಬಹುಪಾತ್ರದ ಫೈಟರ್‌ ವಿಮಾನವಾಗಿದ್ದು,
    ವಾಯು, ನೆಲ ಮತ್ತು ಕಡಲ ಮೇಲಿನ ಕಾರ್ಯಾಚರಣೆಯ ವಿಶೇಷ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ.. ಲಡಾಖ್ ಗಡಿಯಲ್ಲಿ ಸಂಘರ್ಷ; 20 ಭಾರತೀಯ ಯೋಧರು, 43 ಚೀನಾ ಪಡೆ ಸೈನಿಕರ ಸಾವು 

 

Related posts