KSRTC ಗರಡಿಯಲ್ಲಿ ಉತ್ತರದ ತಂಡ; ಯಶೋಗಾಥೆಯ ಗುಟ್ಟು ತಿಳಿಯುವ ಕೌತುಕ

ಬೆಂಗಳೂರು: ಅತ್ಯುತ್ತಮ ಸಾರಿಗೆ ವ್ಯವಸ್ಥೆಗೆ ಹೆಸರಾಗಿರುವ ಕರ್ನಾಟಕದ ಜನಪ್ರಿಯ ಸಾರಿಗೆ ಸಂಸ್ಥೆ KSRTC ಇದೀಗ ವಿವಿಧ ರಾಜ್ಯಗಳ ಆಡಳಿತವರ್ಗದ ಗಮನಕೇಂದ್ರೀಕರಿಸುತ್ತಿವೆ. ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಯಶೋಗಾಥೆಯ ಗುಟ್ಟನ್ನು ತಿಳಿಯುವ ಪ್ರಯತ್ನ ಮಾಡಿದೆ. .

ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಸಲಹೆಗಾರರಾದ ಡಾ. ಕೆ.ವಿ ರಾಜು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು, ಹಾಗೂ ವೃತ್ತಿಪರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೆ. ಷಣ್ಮುಗ ಸುಂದರಂ ನೇತೃತ್ವದ ಅಧಿಕಾರಿಗಳ ತಂಡವು ಬೆಂಗಳೂರಿನಲ್ಲಿ ಮಂಗಳವಾರ (ಸೆ.12ರಂದು) KSRTC ಕೇಂದ್ರ ಕಚೇರಿಗೆ ಭೇಟಿ ನೀಡಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ಪಡೆಯಿತು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ತಂಡವು KSRTC ಅಧ್ಯಕ್ಷರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ,, ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರ ಜೊತೆಗೂ ವಿಚಾರ ವಿನಿಮಯ ನಡೆಸಿದ ಬೆಳವಣಿಗೆಯೂ ಕುತೂಹಲದ ಕೇಂದ್ರಬಿಂದುವಾಯಿತು.

ತಂಡವು, ನಂತರ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4 ಕ್ಕೆ ಭೇಟಿ ನೀಡಿದ ಅಧಿಕಾರಿಗಳು, ನಿಗಮದ ಪ್ರತಿಷ್ಟಿತ ವಾಹನಗಳಾದ ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್ ಅಂಬಾರಿ ಉತ್ಸವ ವಾಹನಗಳ ಕಾರ್ಯಾಚರಣೆ, ತಾಂತ್ರಿಕ ನಿರ್ವಹಣೆಯ ಬಗ್ಗೆ ಮಾಹಿತಿ ಹಾಗೂ ಎಲೆಕ್ಟ್ರಿಕ್ ಬಸ್ಸುಗಳ ಘಟಕ ಮತ್ತು ಚಾರ್ಜಿಂಗ್ ಸ್ಟೇಷನ್ ಗೆ ಭೇಟಿ‌ ನೀಡಿ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕ (ಸಿ&ಜಾ) ಸುಂದರೇಶ್ ಬಾಬು ಎಂ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Uncategorized

Related posts