ದೋಹಾ: ಜಾಗತಿಕ ಭಯೋತ್ಪಾದನೆಯ ಮೂಲೋಚ್ಚಾಟನೆಗೆ ಪಣತೊಟ್ಟಿದ್ದ ಅಮೆರಿಕಾ ಇದೀಗ ಆತಂಕವಾದದ ಮೂಲ ಸ್ಥಾನವನ್ನೇ ಚಕ್ರವ್ಯೂಹದಲ್ಲಿ ಸೆರೆಯಿಟ್ಟಿದೆ. ತಾಲಿಬಾನ್ ನೆಲೆಯಲ್ಲಿ ಮಹತ್ವದ ಸೂತ್ರವೊಂದನ್ನು ಹಾಕಿರುವ ಅಮೆರಿಕಾ, ಇನ್ನು ಮುಂದೆ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನಾ ಕೃತ್ಯ ನಡೆಯದಂತೆ ಒಪ್ಪಂದ ಮಾಡಿಸಿಕೊಂಡಿದೆ.
ಕತಾರ್ ರಾಜಧಾನಿ ದೋಹಾದಲ್ಲಿ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ ಪ್ರತಿನಿಧಿ ಝಲ್ಮಯ್ ಖಲೀಜಾದ್ ಹಾಗೂ ತಾಲಿಬಾನ್ನ ನಾಯಕರ ಪ್ರತಿನಿಧಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರ ಈ ದಿಟ್ಟ ನಿರ್ಧಾರ ಕಾರ್ಯರೂಪಕ್ಕೆ ಬಂದಿದ್ದು ಈ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶಿಂಗ್ಲಾ ಹಾಗೂ ಪಾಕಿಸ್ಥಾನ, ಇಂಡೋನೇಷ್ಯಾ, ಉಜ್ಬೇಕಿಸ್ಥಾನ, ತಜಕಿಸ್ಥಾನ ಸಹಿತ ಸುಮಾರು 30 ರಾಷ್ಟ್ರಗಳ ಪ್ರತಿನಿಧಿಗಳು ಹಾಜರಿದ್ದರು. .
ಅಫ್ಘಾನಿಸ್ತಾನವು ಎಂದಿಗೂ ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ನೆಲೆಯಾಗುವುದಿಲ್ಲಎಂದು ಎಂಬುದನ್ನು ಖಚಿತಪಡಿಸಿದ ನಂತರವೇ ತಾಲಿಬಾನಿಗಳ ಜೊತೆ ಈ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಹಿನ್ನೆಲೆಯಲ್ಲಿ ಅಮೆರಿಕಾವು ತನ್ನ ಎಲ್ಲಾ ಪಡೆಗಳನ್ನು ಅಫ್ಘಾನಿಸ್ತಾನದಿಂದ 14 ತಿಂಗಳಲ್ಲಿ ಹಿಂತೆಗೆದುಕೊಳ್ಳಲಿದೆ. ಆವರೆಗೂ ಯುಎಸ್ ಅಫ್ಘಾನಿಸ್ತಾನದಲ್ಲಿ ಯುಎಸ್ ಮಿಲಿಟರಿ ಪಡೆಗಳ ಸಂಖ್ಯೆಯನ್ನು 8,600 ಕ್ಕೆ ಇಳಿಸುತ್ತದೆ.