ಕೊರೋನಾ ಸೈನಿಕರ ನೆರವಿಗೆ ಧಾವಿಸಿದ ಮೇಧಾವಿಗಳು

ಬೆಂಗಳೂರು: ಪ್ರಸ್ತುತ ಕೊರೋನಾ ಸಂಬಂಧ ಲಾಕ್’ಡೌನ್ ಜಾರಿಯಲ್ಲಿರುವುದರಿಂದಾಗಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅವರಷ್ಟೇ ಅಲ್ಲ ಹಗಲಿರುಳು ದುಡಿಯುತ್ತಿರುವ ಕೊರೋನಾ ವಾರಿಯರ್ಸ್ ಕೂಡಾ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹಾ ಕೊರೋನಾ ಸೈನಿಕರ ಸೇವೆಯಲ್ಲಿ ನಿರತರಾಗಿದ್ದಾರೆ ಬೆಂಗಳೂರಿನ ಉದ್ಯಮಪತಿಗಳು.

ರಾಜ್ಯದಲ್ಲಿ ಕೊರೋನಾ ಸೋಂಕಿಗೊಳಗಾದವರಿಗೆ ಆಸ್ಪತ್ರೆ ನಿರ್ಮಿಸಲು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಮುಂದಾಗಿ ಜನರ ಪ್ರಶಂಶೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಕೈಂಕರ್ಯಗಳಲ್ಲಿ ಸದಾ ಮುಂದಿರುವ ಸುಧಾ ಮೂರ್ತಿ, ಕೊರೊನಾ ವಿರುದ್ಧ ಹೋರಾಡಲು ಒಟ್ಟು 100 ಕೋಟಿ ರೂ.ಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ  ಬಿಡುಗಡೆ ಮಾಡಿ, ಇದರಲ್ಲಿ 50 ಕೋಟಿ ರೂಪಾಯಿಗಳನ್ನು ಪಿಎಂ ಕೇರ್ಸ್ ನಿಧಿಗೆ ಸಮರ್ಪಿಸಿದ್ದಾರೆ. ಉಳಿದ ಹಣವನ್ನು ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳ ಸಾಮರ್ಥ್ಯ ವಿಸ್ತರಣೆಗೆ, ವೆಂಟಿಲೇಟರ್, ಪರೀಕ್ಷಾ ಕಿಟ್ ಹಾಗೂ ಪಿಪಿಇ ಇನ್ನಿತರೆ ಪರಿಕರಗಳನ್ನು ಆರೋಗ್ಯ ರಕ್ಷಣೆ ಸಿಬ್ಬಂದಿಗೆ ನೀಡಲು ವಿನಿಯೋಗಿಸಿದೆ.

ಕೊರೋನಾ ವಾರಿಯರ್ಸ್ ಹಿತರಕ್ಷರು ಇವರು.. 

ಇದೆ ರೀತಿಯಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ಹಾಗೂ ಕೊರೋನಾ ವಾರಿಯರ್ಸ್’ಗಳ ನೆರವಿಗೆ ಧಾವಿಸಿದ್ದಾರೆ ಐಕಾನ್ ಸಂಸ್ಥೆಯ ಮುಖ್ಯಸ್ಥ ಉಸ್ಮಾನ್ ಷರೀಫ್.

ತಮ್ಮ ಮುಂದಾಳುತ್ವದ ಅನ್ವರ್ ಷರೀಫ್ ಫೌಂಡೇಶನ್ ಮೂಲಕ ಆರಂಭದಲ್ಲಿ ಏಕಾಂಗಿಯಾಗಿ ಸೇವೆಗಿಳಿದ ಇವರ ಜೊತೆ ನಂತರದ ದಿನಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕು ಹೋರಾಟಗಾರ, ವಕೀಲ ಎಂ.ಎಸ್.ಖಾನಾಪುರಿ ಸೇರಿದಂತೆ ಅನೇಕರು ಸ್ವಯಂಸೇವಕರಾಗಿ ಕೈಜೋಡಿಸಿದರು. ಲಾಕ್’ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ಪಡಿತರ ಒದಗಿಸುವುದು, ಔಷಧಿ ಅನಿವಾರ್ಯತೆ ಇರುವವರಿಗಾಗಿ ವೈದ್ಯಕೀಯ ಸವಲತ್ತು ಕಲ್ಪಿಸುವ ಕೆಲಸಕ್ಕಿಳಿದ ಉಸ್ಮಾನ್ ಷರೀಫ್, ಕಳೆದೊಂದು ತಿಂಗಳಿನಿಂದ ಬೆಂಗಳೂರಿನ ಹಲವೆಡೆ ಕೊರೋನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್, ಡಾಕ್ಟರ್ಸ್, ನರ್ಸ್, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹಾಗೂ ಪತ್ರಕರ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸುವಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ.. ಲಾಕ್ ಡೌನ್ ಹೊಡೆತ; ಅಸಹಾಯಕರಲ್ಲಿ ದೇವರನ್ನು ಕಾಣುವ ಯುವಕರು

ಬಹುತೇಕ ಸಂಘ ಸಂಸ್ಥೆಗಳು ಅಸಹಾಯಕರಿಗೆ ಪಡಿತರ, ಊಟ ವಿತರಿಸುತ್ತದೆ. ಆದರೆ ಕೊರೋನಾ ಸಂಬಂಧ ದುಡಿಯುತ್ತಿರುವವರ ಸಂಕಷ್ಟಕ್ಕೆ ನೆರವಾಗುವವರು ವಿರಳ. ಈ ಸಮಸ್ಯೆ ತಮ್ಮ ಗಮನಕ್ಕೆ ಬಂದಿದ್ದೇ ತಡ ಪೊಲೀಸ್ ಅಧಿಕಾರಿಗಳಿಂದ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಕೊರೋನಾ ವಾರಿಯರ್ಸ್ ಬಗ್ಗೆ ಮಾಹಿತಿ ಪಡೆದ ಉಸ್ಮಾನ್ ಷರೀಫ್ ತಮ್ಮ ಫೌಂಡೇಶನ್ ಮೂಲಕ ಸುಮಾರು 13 ತಂಡಗಳನ್ನು ರಚಿಸಿ ನೆರವಿನ ಕಾರ್ಯದಲ್ಲಿ ತೊಡಗಿದ್ದಾರೆ.

ಈವರೆಗೆ ಪಡಿತರ ಸಾಮಾಗ್ರಿ, ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್’ಗಳು ಸೇರಿದಂತೆ ೩೦ ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಉಸ್ಮಾನ್ ಷರೀಫ್ ಅವರ ಸಹವರ್ತಿ ಎಂ.ಎಸ್.ಖಾನಾಪುರಿ ತಿಳಿಸಿದ್ದಾರೆ. ಪೊಲೀಸರೂ ಇವರ ಈ ಕಾರ್ಯದಲ್ಲಿ ಕೈಜೋಡಿಸಿ ತಮ್ಮ ಇಲಾಖೆಯ ಪರವಾಗಿ ಕೃತಜ್ಞತೆ ಸಲ್ಲಿಸಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ.. ಡೋಂಟ್ ವರಿ.. ಜುಲೈ 31ರ ವರೆಗೂ ವರ್ಕ್ ಫ್ರಮ್ ಹೋಮ್ 

 

Related posts