ಡೋಂಟ್ ವರಿ.. ಜುಲೈ 31ರ ವರೆಗೂ ವರ್ಕ್ ಫ್ರಮ್ ಹೋಮ್

ಬೆಂಗಳೂರು: ಕೊರೋನಾ ಹಾವಳಿ ಮಿತಿ ಮೀರಿದ್ದು ಎಲ್ಲೆಲ್ಲೂ ಆತಂಕ ಆವರಿಸಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಎಲ್ಲಿ ಸೋಂಕು ಹರಡುತ್ತೋ ಎಂಬ ಭೀತಿ. ಕಾರಣ ಲಾಕ್‌ಡೌನ್..

ದೇಶಾದ್ಯಂತ ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಿಸುತ್ತಿದೆ. ಸೋಂಕಿತರ ಸಂಖ್ಯೆಯೂ ತೀವ್ರಗತಿಯಲ್ಲಿದ್ದು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವಂತೆ ಹಲವು ರಾಜ್ಯಗಳು ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಈ ನಡುವೆ ದೇಶದ ಇಂಡಸ್ಟ್ರೀಯಲ್ ಹಬ್ ಎಂದೇ ಗುರುತಾಗಿರುವ ಗುರ್‌ಗಾಂವ್‌ನಲ್ಲಿರುವ ಬಹುತೇಕ ಕಂಪೆನಿಗಳು ತನ್ನ ನೌಕರರಿಗೆ ಜುಲೈ ಅಂತ್ಯದವರೆಗೂ ವರ್ಕ್ ಫ್ರಮ್ ಹೋಮ್ ಘೋಷಿಸಿದೆ. ಇದೇ ರೀತಿ ಕರ್ನಾಟಕದ ಕಂಪೆನಿಗಳೂ ಜುಲೈ 30ರ ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಾಕಾಶ ಸಿಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು ಇದರಿಂದಾಗಿ ಐಟಿ ಕ್ಷೇತ್ರವು ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ. ಈ ವಿಚಾರ ಬಗ್ಗೆ ಮಂಗಳವಾರ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಅವರು ಕೇಂದ್ರ ಐಟಿ ಹಾಗೂ ದೂರಸಂಪರ್ಕ ಸಚಿವ ರವಿಶಂಕರ್ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದ ವೇಳೆ ಗಮನಸೆಳೆದರು. ಐಟಿ ಕ್ಷೇತ್ರದ ವೃತ್ತಿಪರರಿಗೆ ಈ ವರ್ಷಾಂತ್ಯದವರೆಗೂ ವರ್ಕ್ ಫ್ರಮ್ ಹೋಮ್ ಸೌಲಭ್ಯ ವಿಸ್ತರಿಸುವುದು ಒಳಿತು ಎಂದು ಡಾ.ಅಶ್ವತ್ಥನಾರಾಯಣ್ ಸಲಹೆ ಮಾಡಿದರು.

ಈ ವೇಳೆ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸಿದ ಸಚಿವ ರವಿಶಂಕರ್ ಪ್ರಸಾದ್, ಜುಲೈ ಅಂತ್ಯದವರೆಗೆ ಈ ಅವಾಕಾಶ ಕಲ್ಪಿಸಲಾಗಿದೆ ಎಂದರು. ಈ ವಿಚಾರದಲ್ಲಿ ಐಟಿ ಕ್ಷೇತ್ರದ ಗಣ್ಯರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಸಮಸ್ಯೆ ಆಲಿಸುವ ಬಗ್ಗೆ ಕೇಂದ್ರ ಐಟಿ ಸಚಿವರು ಸಹಮತ ವ್ಯಕ್ತಪಡಿಸಿದರು.

ಇದನ್ನೂ ಓದಿ.. ಖುಷಿಪಡಿಸೋ ರೌಡಿ ಬೇಬಿ 

 

Related posts