ಡಿಜಿಟಲ್ ಯುಗಕ್ಕೆ ಕ್ರಾಂತಿಯ ಸ್ವರೂಪ ನೀಡಿದ್ದೇ ವಾಟ್ಸಪ್ ಮೆಸೆಂಜರ್.. ಪ್ರಸ್ತುತ ವ್ಯವಸ್ಥೆಯಲ್ಲಿ ವಾಟ್ಸಪ್ ಕೂಡಾ ಕೊರೋನಾ ಹೊಡೆತಕ್ಕೆ ನಲುಗಿದೆ. ಇನ್ನು ಮುಂದೆ ಬೇಕಾಬಿಟ್ಟಿ ಮೆಸೇಜ್ ಫಾರ್ವಾರ್ಡ್ ಮಾಡುವಂತಿಲ್ಲ.
ಸುಂದರ ಸರಳ ಸಂದೇಶಕ್ಕೆ ಹೆಸರುವಾಸಿಯಾಗಿರುವ ವಾಟ್ಸಪ್ ಪ್ರಸ್ತುತ ಕರೆ, ವೀಡಿಯೊ ಕಾಲ್ ಮೂಲಕ ಜಗತ್ತಿನ ನಡುವಿನ ಅಂತರವನ್ನೇ ಕಳಚಿಹಾಕಿದ ಖ್ಯಾತಿಒಳಗಾಗಿ ದೆ. ಆದರೆ ಅದೇ ಜನಪ್ರಿಯ ಮೆಸೆಂಜರ್ ವಾಟ್ಸಪ್ ಕೊರೋನಾ ಕಾರಣಕ್ಕಾಗಿ ಬೆಚ್ಚಿ ಬಿದ್ದಂತಿದೆ. ಹಾಗಾಗಿ ಹೆಚ್ಚೆಚ್ಚು ಫಾರ್ವಾರ್ಡ್’ಗೆ ಬ್ರೇಕ್ ಬಿದ್ದಿದೆ.
ಕೊರೋನಾ ಸಂದರ್ಭದಲ್ಲಿ ಸುಳ್ಳು ವದಂತಿ ಹಬ್ಬುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ವಿಚಾರದಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಜನರಿಗೆ ಜಿಗುಪ್ಸೆಯೂ ಉಂಟಾಗಿದೆ. ಹಾಗಾಗಿ ವಾಟ್ಸಪ್ ಸಂಸ್ಥೆಯೇ ಕೆಲವೊಂದು ನಿರ್ಬಂಧ ಪ್ರಕ್ರಿಯೆಗೆ ಮುನ್ನುಡಿ ಬರೆದಿದೆ. ಅರ್ಥಾತ್, ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಮೆಸೇಜ್ ಫಾರ್ವಾರ್ಡ್ ನಿಷಿದ್ಧ.
ಏನಿದು ವಾಟ್ಸಪ್ ಸ್ಪಷ್ಟನೆ?
ಕೊರೋನಾ ವೈರಾಣು ಹಾವಳಿ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬಹುಪಾಲು ಮಂದಿ ಮನೆಗಳಲ್ಲೇ ಉಳಿದುಕೊಂಡಿದ್ದು ಇದರಿಂದಾಗಿ ವಾಟ್ಸಪ್ ಬಳಕೆಯ ಪ್ರಮಾಣವೂ ಹೆಚ್ಚಾಗಿದೆ. ಅಷ್ಟೇ ಅಲ್ಲ ವದಂತಿ ಹಬ್ಬುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಇದಕ್ಕೆ ಅಂಕುಶ ಹಾಕುವ ಸಂಬಂಧ ಸಂದೇಶವನ್ನು ಒಮ್ಮೆ ಮಾತ್ರ ಫಾರ್ವರ್ಡ್ ಮಾಡುವ ರೀತಿ ವಾಟ್ಸಪ್ ಸೆಟ್ಟಿಂಗ್’ನಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
2018ರಲ್ಲೂ ವಾಟ್ಸಪ್ ಇದೇ ರೀತಿಯ ನಿರ್ಬಂಧ ವಿಶಿಸಿತ್ತು. ಆಗ ವದಂತಿ ಸಂದೇಶಗಳ ಪ್ರಮಾಣ ಬಹಳಷ್ಟು ಕಡಿಮೆಯಾಗಿತ್ತು. ಅದೇ ಸೂತ್ರವನ್ನು ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಮತ್ತೆ ಅಳವಡಿಸಲು ವಾಟ್ಸಪ್ ಮುಂದಾಗಿದೆ. ಇದಕ್ಕೆ ಬಹುತೇಕ ದೇಶಗಳಲ್ಲಿ ಸಹಮತ ವ್ಯಕ್ತವಾಗಿದೆಯಂತೆ.
ಇದನ್ನೂ ಓದಿ.. ಕೊರೋನಾ ವಾರ್ಡಿನಲ್ಲಿ ಸೋಂಕಿತೆ ಮೇಲೆ ರೇಪ್ ; ಯುವತಿ ಸಾವು