ಕೊರೋನಾ ಸಾವಿನ ಸರಣಿ; ಮತ್ತೊಬ್ಬರ ಬಲಿ.. ರಾಜ್ಯದಲ್ಲಿ ಸಾವಿನ ಸಂಖ್ಯೆ 6

ರಾಜ್ಯದಲ್ಲೂ ಮುಂದುವರಿದಿದೆ ಕೊರೊರಾ ಸಾವಿನ ಸರಣಿ.. ಇದೀಗ 80 ವರ್ಷದ ವೃದ್ದೆ ಈ ಸೋಂಕಿಗೆ ಬಲಿಯಾಗಿದ್ದಾಳೆ. ಗದಗ್ ಜಿಲ್ಲೆಯಲ್ಲಿ ಇದು ಮೊದಲ ಬಲಿ..

ಗದಗ್: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾಹಾಮಾರಿ ಕೊರೋನಾ ರಾಜ್ಯದಲ್ಲಿ ಮತ್ತೊಬ್ಬರನ್ನು ಬಲಿತೆಗೆದುಕೊಂಡಿದೆ. ಕೋವಿಡ್-19 ವೈರಾಣು ಸೋಂಕಿನಿಂದ ಬಳಲುತ್ತಿದ್ದ ಗದಗ್’ನ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ವೃದ್ಧೆಯ ಸಾವಿನ ನಂತರ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 6 ಕ್ಕೆ ಏರಿದಂತಾಗಿದೆ.

ಕಲಬುರ್ಗಿ ಹೊರತುಪಡಿಸಿ ಉತ್ತರ ಕರ್ನಾಟಕದಲ್ಲಿ ಕೊರೋನಾ ಸೋನಿಕಿನಿಂದಾದ ಪ್ರಕರಣ ನಡೆದಿರಲಿಲ್ಲ. ಇದೀಗ ಅಲ್ಲಿ ಮೊದಲ ಸಾವಿನ ಘಟನೆ ವರದಿಯಾಗಿದೆ. ಗದಗ ನಗರದ ರಂಗನವಾಡಿ ಗಲ್ಲಿಯ 80 ವರ್ಷದ ವೃದ್ಧೆ ಕೊರೋನಾ ಸೋಂಕಿನ ಕಾರಣಕ್ಕಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 7 ರಂದು ವೃದ್ದೆಗೆ ಸೋಂಕು ದೃಢಪಟ್ಟ ನಂತರ ಪ್ರತ್ಯೇಕ ಕೊರೋನಾ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ರಾತ್ರಿ ಅವರು ಕಾರ್ಡಿಯಾಕ್ ಅರೆಸ್ಟ್ ನಿಂದ ಅವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ.. ಕೊರೋನಾ ವಾರ್ಡಿನಲ್ಲಿ ಸೋಂಕಿತೆ ಮೇಲೆ ರೇಪ್ ; ಯುವತಿ ಸಾವು

ವೃದ್ಧೆಯ ಸಾವಿನ ನಂತರ ಗದಗ್ ಜಿಲ್ಲೆಯ ಅಧಿಕಾರಿಗಳ ಟೆನ್ಷನ್ ಹೆಚ್ಚಾಗಿದೆ. ಗದಗ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸೋಂಕಿತರ  ಸಂಪರ್ಕದಲ್ಲಿದ್ದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಈ ಪೈಕಿ 44 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿಯಲ್ಲೂ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts