ರಾಜ್ಯಾದ್ಯಂತ ಕೊರೋನಾ ತಲ್ಲಣ ಉಂಟಾಗಿದೆ. ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿದ್ದು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇನ್ನುಳಿದ ಮಾರಾಟ ಕೇಂದ್ರಗಳು ಹಾಗೂ ಅಂಗಡಿ ಮುಂಗಟ್ಟುಗಳು ಮುಚ್ಸಿವೆ. ಹೀಗಿರುವಾಗ ಬಾರ್ ಅಥವಾ ಮದ್ಯದಂಗಡಿ ಓಪನ್ ಇರುತ್ತಾ? ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ತೆರೆಯದಂತೆ ಸರ್ಕಾರ ಕಟ್ಟಪ್ಪಣೆ ಮಾಡಿದೆ. ಹಾಗಾಗಿ ಮದ್ಯ ಪ್ರಿಯರಿಗೆ ನಿರಾಸೆ.
ಈ ನಡುವೆ ಮಂಗಳೂರು ಸಹಿತ ದಕ್ಷಿಣಕನ್ನಡದದಲ್ಲಿ ಬಂದ್ ತೆರವಾಗಿರುವ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿವೆ. ಅದರ ಜೊತೆಯಲ್ಲೇ ಮದ್ಯದಂಗಡಿಗಳೂ ಇಂದಿನಿಂದ ಓಪನ್ ಆಗುತ್ತೆ ಎಂಬ ಸುದ್ದಿಯೂ ಹರಿದಾಡಿದೆ. ಗದಗ್ ಜಿಲ್ಲೆಯಲ್ಲಿ ಹಲವು ದಿನಗಳಿಂದ ಕಿಕ್ ಇಲ್ಲದ ಮಂದಿ ಇಂದು ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿಗಳಿಗೆ ಲಗ್ಗೆ ಹಾಕಿದ್ದರು.
ಏಪ್ರಿಲ್ ಒಂದರಂದು ಎಣ್ಣೆ ಅಂಗಡಿ ತೆರೆಯುತ್ತದೆ ಎನ್ನುವ ವದಂತಿಯನ್ನು ನಂಬಿ, ಗದಗ್’ನ ಮುಳಗುಂದ ರಸ್ತೆಯಲ್ಲಿರುವ ಎಂಎಸ್ಐಎಲ್ ಅಂಗಡಿ ತೆಗೆಯುತ್ತದೆನ್ನೋ ಅಂತ ಎಣ್ಣೆ ಪ್ರಿಯರು, ಬೈಕ್ ಗಳಲ್ಲಿ ಬಂದು ಎಂಎಸ್ಐಎಲ್ ಮಳಿಗೆ ಮುಂದೆ ಬೆಳ್ಳಂ ಬೆಳಿಗ್ಗೆಯೇ ಕ್ಯೂ ನಿಂತಿದ್ದರು. ಈಗ ಓಪನ್ ಆಗಬಹುದು, ಆಗ ಓಪನ್ ಆಗಬಹುದು ಎಂದುಕೊಂಡು ಮಹಿಳೆ ಸೇರಿದಂತೆ ನೂರಾರು ಜನ ಕಾಯುತ್ತಿದ್ದರು. ಇನ್ನೇನು ಅಂಗಡಿ ಸಿಬ್ಬಂದಿ ಬರುತ್ತಾನೆ ಎಂದು ಕಾಯುವಷ್ಟರಲ್ಲಿ, ಪೊಲೀಸರು ದೌಡಾಯಿಸಿಬಿಟ್ಟಿದ್ದರು. ಪೊಲೀಸರು ಸ್ಥಳಕ್ಕಾರೆ ಲಗ್ಗೆ ಹಾಕುತ್ತಿದ್ದಂತೆಯೇ ಈ ಎಣ್ಣೆ ಪ್ರಿಯರು ದಿಕ್ಕಾಪಾಲಾಗಿ ಓಡಿಬಿಟ್ಟರು.
ಇಂದು ಏಪ್ರಿಲ್ ಒಂದು. ಮೂರ್ಖರ ದಿನ ಅಂತ ಯಾರೋ ಎಣ್ಣೆ ಅಂಗಡಿಯ ಬಗ್ಗೆ ಕಿಕ್ ಪ್ರಿಯರಿಗೆ ಆಸೆ ಹುಟ್ಟಿಸಿದ್ದರು. ಅನೇಕ ದಿನಗಳಿಂದ ತೀರ್ಥದ ರುಚಿ ಕಾಣದ ಈ ಮಂದಿಗೆ ಇದು ಏಪ್ರಿಲ್ ಫೂಲ್ ವಿಚಾರ ಅಂತ ತಿಳಿದಿರಲಿಲ್ಲ.