ಆಸ್ಟ್ರೇಲಿಯಾ ವನಿತೆಯರಿಗೆ ಟಿ-20 ವಿಶ್ವಕಪ್

ಮೆಲ್ಬರ್ನ್: ವಿಶ್ವ ಮಹಿಳಾ ದಿನದಂದು ವಿಶ್ವ ಚಾಂಪಿಯನ್ ಆಗುವ ಭಾರತದ ವನಿತೆಯರ ಕ್ರಿಕೆಟ್ ತಂಡದ ಕನಸು ಭಗ್ನವಾಯಿತು. ಆಸ್ಟ್ರೇಲಿಯಾ ತಂಡದ ಎದುರು ಭಾರತೀಯ ವನಿತೆಯರು ಮಂಡಿಯೂರಿದ್ದು ಈ ಬಾರಿತ ಮಹಿಳಾ ಟಿ-20 ವಿಶ್ವಕಪ್ಪನ್ನು ಆಸೀಸ್’ಗೆ ಒಪ್ಪಿಸಿದ್ದಾರೆ.

ನಾಯಕಿ ಹರ್ಮನ್‍ಪ್ರೀತ್ ಕೌರ್ ಹಾಗೂಸ್ಮೃತಿ ಮಂದಾನ ಅವರ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ಯಶೋಗಾಥೆ ಬರೆಯಲು ವಿಫಲವಾಯಿತು.

ಆಸ್ಟ್ರೇಲಿಯಾ ಒಡ್ಡಿದ 185 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ 99 ರನ್‍ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು.

Related posts