ಬುಲೆಟ್‌ಪ್ರೂಫ್ ಗಾಜಿನ ಕವಚದ ಹಿಂದೆ ನಿಂತು ಅಭಿಮಾನಿಗಳನ್ನು ಭೇಟಿಯಾದ ಅಮಿತಾಭ್ ಬಚ್ಚನ್

ಮುಂಬೈ: ಬೆದರಿಕೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದರೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಭಾನುವಾರದ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಮುಂಬೈನ ಜಲ್ಸಾ ನಿವಾಸದ ಹೊರಗೆ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಅವರು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.

ಭದ್ರತಾ ಮುನ್ನೆಚ್ಚರಿಕೆಯ ಭಾಗವಾಗಿ ಈ ಬಾರಿ ಬುಲೆಟ್‌ಪ್ರೂಫ್ ಗಾಜಿನ ಕವಚದ ಹಿಂದೆ ನಿಂತು ಅಭಿಮಾನಿಗಳತ್ತ ಕೈಬೀಸಿ ಅವರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಪುತ್ರ ಅಭಿಷೇಕ್ ಬಚ್ಚನ್ ಕೂಡ ತಂದೆಯೊಂದಿಗೆ ಇದ್ದರು.

ಕಳೆದ ವಾರ ಅಮಿತಾಭ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದ ಹಿನ್ನೆಲೆಯಲ್ಲಿ ಜಲ್ಸಾ ಬಂಗಲೆ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಅಭಿಮಾನಿಗಳನ್ನು ಭೇಟಿಯಾಗುವ ವೇಳೆ ಅಭಿಷೇಕ್ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದರು. ತಂದೆಯ ಸುರಕ್ಷತೆಯ ಬಗ್ಗೆ ಅವರು ವಿಶೇಷ ಕಾಳಜಿ ವಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Related posts