ಕೊರೋನಾ ವೇಗ ಆತಂಕಕಾರಿ; ಇಟಲಿ, ಸ್ಪೇನ್ ದೇಶಗಳನ್ನು ಹಿಂದಿಕ್ಕಿತೇ ಭಾರತ?

ದೆಹಲಿ: ಜಗತ್ತಿನಾದ್ಯಂತ ಕೊರೋನಾ ಸವಾರಿ ಚುರುಕಾಗಿದ್ದು ಬಹುತೇಕ ದೇಶಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಇತ್ತ ಭಾರತದಲ್ಲೂ ಕೊರೋನಾ ಹಾವಳಿ ಜೋರಾಗಿದ್ದು ಶುಕ್ರವಾರ ಒಂದೇ ದಿನ 6,654 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇದು ಈ ವರೆಗಿನ ದಾಖಲೆ ಎನ್ನಲಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1,25,101ಕ್ಕೆ ತಲುಪಿದೆ.

ಇದೇ ವೇಳೆ ಶುಕ್ರವಾರ ಒಂದೇ ದಿನ 137 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಇದರೊಂದಿಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3720ಕ್ಕೆ ಏರಿಕೆಯಾಗಿದೆ.

ಈ ನಡುವೆ ಭಾರತವು ಕೋವಿಡ್ -19 ಹೊಸ ಹಾಟ್ ಸ್ಪಾಟ್ ಎಂದು ಗುರುತಾಗಿದೆಯೇ? ಎಂಬ ಪ್ರಶ್ನೆಗಳೂ ಮೂಡಿವೆ. ಸಕ್ರೀಯ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಇದೀಗ ಈ ವರೆಗೆ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಇಟಲಿ, ಸ್ಪೇನ್ ದೇಶಗಳನ್ನೂ ಮೀರಿದೆ. ಅಂಕಿ ಅಂಶಗಳ ಪ್ರಕಾರ ಭಾರತ ಈಗ 5 ನೇ ಸ್ಥಾನದಲ್ಲಿದೆ.

ಈ ತಿಂಗಳಾರಂಭದಿಂದ ನಿತ್ಯ 2000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂಖ್ಯೆ ಕಳೆದೊಂದು ವಾರದಲ್ಲಿ 6,000 ದಾಟುತ್ತಿರುವುದು ಆತಂಕಕಾರಿ ಸಂಗತಿ.

Related posts