ಬೆಂಗಳೂರು: ಕೊರೊನಾ ವೈರಾಣು ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಲಾಕ್’ಡೌನ್ ಮೇ 3ರ ವರೆಗೂ ಮುಂದುವರಿದಿದೆ. ಅದರಲ್ಲೂ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹಾಟ್’ಸ್ಪಾಟ್ ಎಂದು ಗುರುತಿಸಲಾಗಿದ್ದು ಆ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಯಲ್ಲಿದೆ.
ಈ ನಡುವೆ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಬುಧವಾರ ಮಧ್ಯರಾತ್ರಿಯಿಂದ ಲಾಕ್’ಡೌನ್ ಸಡಿಲಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 359 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಆದರೆ ಜನಸಾಮಾನ್ಯರಿಗೆ ಯಾವ ಪ್ರದೇಶ ಕಂಟೈನ್ಮೆಂಟ್ ಝೋನ್, ತಾವು ಆ ಪ್ರದೇಶದಲ್ಲಿದ್ದೇವೆಯೇ ಎಂಬ ಗೊಂದಲ ಇದೆ.
ಎಲ್ಲೆಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಝೋನ್’ಗಳಿವೆ ಎಂಬ ಬಗ್ಗೆ ಇಲ್ಲಿದೆ ಪಟ್ಟಿ.
- ಬೆಂಗಳೂರಿನಲ್ಲಿ 19
- ಕಲಬುರಗಿಯಲ್ಲಿ 17
- ಮೈಸೂರಿನಲ್ಲಿ 12
- ಬಾಗಲಕೋಟೆಯಲ್ಲಿ 11
- ಮಂಗಳೂರಿನಲ್ಲಿ 7
- ನಂಜನಗೂಡು 6
- ಚಿಕ್ಕಬಳ್ಳಾಪುರದಲ್ಲಿ 4
- ಬಳ್ಳಾರಿಯಲ್ಲಿ 3
- ಬೆಳಗಾವಿಯಲ್ಲಿ 3
- ಬೆಂಗಳೂರು ಗ್ರಾಮಾಂತರದಲ್ಲಿ 2
- ಮಂಡ್ಯದಲ್ಲಿ 2
- ಹುಬ್ಬಳ್ಳಿಯಲ್ಲಿ 2
- ಬೀದರ್’ನಲ್ಲಿ 2
- ಗೌರಿಬಿದನೂರಿನಲ್ಲಿ 2
- ಚಿತ್ತಾಪುರದಲ್ಲಿ 1
- ಶಹಬಾದ್’ನಲ್ಲಿ 1
- ವಾಡಿಯಲ್ಲಿ 1
- ಆಳಂದಲ್ಲಿ 1
- ಸಂಕೇಶ್ವರದಲ್ಲಿ 1
- ಕುಡಚಿಯಲ್ಲಿ 1
- ಬಸವಕಲ್ಯಾಣದಲ್ಲಿ 1
- ಚಿತ್ರದುರ್ಗದಲ್ಲಿ 1
- ಶಿರಾದಲ್ಲಿ 1
- ಕಾರವಾರದಲ್ಲಿ 1
- ವಿಜಯಪುರದಲ್ಲಿ 1
- ಗದಗದಲ್ಲಿ 1