ಲಾಕ್’ಡೌನ್ ನಡುವೆ ಬಾಲಕಿ ಮೇಲೆ ಗ್ಯಾಂಗ್ ರೇಪ್; ವೀಡಿಯೋ ವಿಕೃತಿ

ಜಗತ್ತು ಕೊರೋನಾ ಸಂಕದಲ್ಲಿರುವಾಗಲೇ ಕೀಚಕರ ಗುಂಪು ಬಾಲಕಿ ಮೇಲೆ ಕಾಮ ಕ್ರೌರ್ಯ ಪ್ರದರ್ಶಿಸಿದೆ. ಈ ಕ್ರೌರ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಲಕ್ನೋ: ಇಡೀ ಜಗತ್ತೇ ಕೊರೋನಾ ಹಾವಳಿಯಿಂದ ನಲುಗಿದೆ. ಭಾರತದಲ್ಲೂ ಲಾಕ್’ಡೌನ್ ಜಾರಿಯಲ್ಲಿದ್ದು ದೇಶದ ಜನ ಕಂಗಾಲಾಗಿದ್ದಾರೆ. ಈ ಸಂಕಟ ಕಾಲದಲ್ಲೇ ಕೀಚಕರು ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ.

ಅಗೋಚರ ಯಮಧೂತ ಕೊರೋನಾ ವೈರಾಣು ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಕಾಮುಕರ ಅಟ್ಟಹಾಸ ಮಾತ್ರ ತಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಉದಾಹರಣೆಯಂತಿದೆ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಕ್ರೌರ್ಯ.

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಿಸ್ರಿಖ್ ಸಮೀಪ 13 ವರ್ಷದ ಬಾಲಕಿ ಮೇಲೆ ಕೀಚಕರ ಗ್ಯಾಂಗ್ ಸಾಮೂಹಿಕ ಅತ್ಯಾಚಾರ ಎಸಗಿದೆ. ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ಮನೆಯಿಂದ ಹೊರ ಹೋಗಿದ್ದ ಬಾಲಕಿಯನ್ನು 6 ಮಂದಿ ಪುಂಡರು ಅಪಹರಿಸಿ ಶಾಲಾ ಕಟ್ಟಡವೊಂದರಲ್ಲಿ ಅತ್ಯಾಚಾರ ಎಸಗಿದ್ದಾರೆ. ಇವರ ವಿಕೃತಿ ಮನಸ್ಸು ಹೇಗಿತ್ತೆಂದರೆ. ಬಾಲಕಿಯ ಮೇಲೆ ಕಾಮ ಕ್ರೌರ್ಯ ಪ್ರದರ್ಶಿಸಿದ್ದಷ್ಟೇ ಅಲ್ಲ, ಗ್ಯಾಗ್ ರೇಪ್ ಕೃತ್ಯವನ್ನು ವೀಡಿಯೋ ಮಾಡಿದ್ದಾರೆ.

ಇದನ್ನೂ ಓದಿ.. ಕೊರೋನಾ ಪರಿಸ್ಥಿತಿಯಿಂದ ನಾಡಿನ ದೊರೆಗೆ ಕಂಟಕ; ಶ್ರೀಗಳ ಭವಿಷ್ಯವಾಣಿ 

ಕೀಚಕರ ಕೈಯಿಂದ ಪ್ರಯಾಸಪಟ್ಟು ತಪ್ಪಿಸಿಕೊಂಡು ಮನೆ ಸೇರಿದ ಈ ಬಾಲಕಿ ತನ್ನ ಮೇಲಾಗಿರುವ ಕ್ರೌರ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಾಮುಕರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಸಂತ್ರಸ್ತ ಬಾಲಕಿಯ ನೆರೆಮನೆಯವರೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ.. ಮೇ 3ರ ನಂತರವೂ ಲಾಕ್’ಡೌನ್ ಮುಂದುವರಿಕೆ; ಮೋದಿ ನಿರ್ಧಾರದ ಬಗ್ಗೆ ಕುತೂಹಲ

 

Related posts