ಸಿಡಿದೆದ್ದ ಬಿಜೆಪಿ ನಾಯಕಿ; ಅಧಿಕಾರಿಗೆ ಥಳಿಸಿದ ವೀಡಿಯೋ..

ಅಪಮಾನ ಮಾಡಿದರೆಂದು ಆರೋಪಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕಿ ಹಿಗ್ಗಾ ಮುಗ್ಗಾ ಥಳಿಸಿದ ವೀಡಿಯೊ ವೈರಲ್ ಆಗಿದೆ. ಹರ್ಯಾಣ ರಾಜ್ಯದ ಹಿಸ್ಸಾರ್ ಬಳಿ ಈ ಘಟನೆ ನಡೆದಿದ್ದು ಈ ಹಲ್ಲೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಹಿಸಾರ್‌ ನ ಮಾರುಕಟ್ಟೆ ಸಮಿತಿಯ ಅಧಿಕಾರಿಯು ಟಿಕ್ ಟಾಕ್ ಸ್ಟಾರ್ ಆಗಿರುವ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ. ಇದರಿಂದ ಕುಪಿತರಾಗಿದ್ದ ಬಿಜೆಪಿ ನಾಯಕಿ ಪೊಲೀಸರೆದುರೇ ಆ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಹಲ್ಲೆ ವೀಡಿಯೊ ಮೊಬೈಲ್’ನಲ್ಲಿ ಸೆರೆಯಾಗಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ.. ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್ 

 

Related posts