ಜೊತೆ ಜೊತೆಯಲಿ.. ನನ್ನರಸಿ ರಾಧೆ.. ನಮ್ಮನೆ ಯುವರಾಣಿ.. ಗಟ್ಟಿಮೇಳ.. ಯಾವ ಸೀರಿಯಲ್ ಶೂಟಿಂಗ್? ಲೆಕ್ಕಾಚಾರ ಶುರು..

ಬೆಂಗಳೂರು: ಕೊರೋನಾದ ಭಯಾನಕತೆಯ ನಡುವೆ ಜನಪ್ರಿಯ ಧಾರಾವಾಹಿಗಳು ಮಂಕಾಗಿದ್ದವು. ಕಿರುತೆರೆ ಧಾರಾವಾಹಿಗಳು ನೇಪಥ್ಯಕ್ಕೆ ಸರಿದಿದ್ದವು. ಇದೀಗ ಮತ್ತೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದು ರೆಡಿಯಾಗಿದೆ.

ಈವರೆಗೂ ಕಿರುತೆರೆ ಧಾರಾವಾಹಿಗಳ ಶೂಟಿಂಗ್’ಗೆ ನಿರ್ಬಂಧವಿತ್ತು. ಹಾಗಾಗಿ ಸುಮಾರು 110 ಸೀರಿಯಲ್ ಗಳು ನಿರ್ಮಾಣ ಸ್ಥಗಿತವಾಗಿ, 6೦೦೦ ಕಾರ್ಮಿಕರ ಜೀವನ ದುಸ್ತರವಾಗಿದೆ. ಇದೀಗ ಆ ನಿರ್ಬಂಧವನ್ನು ಸಡಿಲಿಸಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ವೀಕ್ಷಕರ ನೆಚ್ಚಿನ ಧಾರಾವಾಹಿಗಳ ಪ್ರಸಾರ ಪುನರಾರಂಭವಾಗಲಿದೆ.

ಅತ್ಯಲ್ಪ ಪ್ರಮಾಣದ ಕಲಾವಿದರನ್ನು ತಂತ್ರಜ್ಞರನ್ನು ಬಳಸಿಕೊಂಡು ಟಿವಿ ಸೀರಿಯಲ್ ಗಳನ್ನು ಮನೆಯ ಒಳಗೆ ಚಿತ್ರೀಕರಣ ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ದ ಅನುಮತಿ ನೀಡಿದೆ.

ಟೆಲೆವಿಜನ್ ಅಸೋಸಿಯೇಷನ್ ಪ್ರಮುಖರೊಂದಿಗೆ ಮಂಗಳವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕಿರುತೆರೆ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಬಗ್ಗೆ ಸರ್ಕಾರದ ಗಮನಸೆಳೆಯಲಾಗಿತ್ತು. ಆರ್ಥಿಕ ಸಂಕಷ್ಟ ದಿಂದ ಪಾರಾಗಲು ಚಿತ್ರೀಕರಣ ಪುನರಾರಂಭವೊಂದೇ ಮಾರ್ಗ ಎಂದು ಅಭಿಪ್ರಾಯಕ್ಕೆ ಬಂದ ಸರ್ಕಾರ ಕೆಲವು ಷರತ್ತವಿಧಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

ಇದನ್ನೂ ಓದಿ.. ಈ ಸಿನಿಮಾ ನಿರ್ದೇಶಕನ ಪಾಲಿಗೆ ಲಾಕ್’ಡೌನ್ ಸಿಹಿ ನೋವು

ರಸ್ತೆಯಲ್ಲಿ ಸಾರ್ವಜನಿಕವಾಗಿ ಚಿತ್ರೀಕರಿಸಲು ಕೊರೊನಾ ಸಂದರ್ಭದಲ್ಲಿ ಅನುಮತಿ ಇಲ್ಲ. ಇನ್ ಡೋರ್ ಚಿತ್ರೀಕರಣಕ್ಕೆ ಅವಕಾಶ ಇದ್ದು, ಮನೆಯೊಳಗೆ ಹತ್ತರಿಂದ ಹನ್ನೆರಡು ಜನ ಸೇರಿ ಚಿತ್ರೀಕರಣ ನಡೆಸಬಹುದಾಗಿದೆ. ಕ್ಯಾಮರಾಮನ್, ಲೈಟ್ ಬಾಯ್ ಬಿಟ್ಟರೆ ಟ್ರಾಲಿ ಇತ್ಯಾದಿಗಳು ಇರುವಂತಿಲ್ಲ. ರಿಯಾಲಿಟಿ ಶೋಗಳ, ಸಿನಿಮಾ ಚಿತ್ರಗಳ ಚಿತ್ರೀಕರಣ ನಡೆಸುವಂತಿಲ್ಲ.

ಇದನ್ನೂ ಓದಿ.. ವಿಚಿತ್ರ ಭಕ್ತಿ ಪರಾಕಾಷ್ಠೆ; ಮರ್ಮಾಂಗವನ್ನೇ ಕತ್ತರಿಸಿ ಶಿವನಿಗೆ ಸಮರ್ಪಿಸಿದ ಭೂಪ 

 

Related posts