ಈ ಸಿನಿಮಾ ನಿರ್ದೇಶಕನ ಪಾಲಿಗೆ ಲಾಕ್’ಡೌನ್ ಸಿಹಿ ನೋವು; ರಜಾಕಾಲದಲ್ಲಿ ಇನ್ನೆರಡು ಕಥೆಗಳು ರೆಡಿ..

ಬೆಂಗಳೂರು: ಕೊರೋನಾ ಹಾವಳಿ ಸಿನಿಮಾ ರಂಗಕ್ಕೂ ಬಲವಾದ ಆಘಾತ ನೀಡಿದೆ. ಸಾಲ ಮಾಡಿ ಸಿನಿಮಾ ನಿರ್ಮಾಣ ಮಾಡುತ್ತಿರುವ ದಿಗ್ಗಜ ಪ್ರತಿಭೆಗಳೂ ಇದೀಗ ಚಿಂತಾಕ್ರಾಂತರಾಗಿದ್ದಾರೆ. ಆದರೆ ಕರಾವಳಿ ಪ್ರತಿಭೆ ಇಸ್ಮಾಯಿಲ್ ಮೂಡುಶೆಡ್ಡೆಯವರ ಪಾಲಿಗೆ ಈ ಲಾಕ್’ಡೌನ್ ಸಿಹಿನೋವು ಎಂಬಂತಾಗಿದೆ.

ಕೋಸ್ಟಲ್’ವುಡ್’ನ ಹಾಸ್ಯಮಯ ಸಿನಿಮಾ ‘ಪಮ್ಮಣ್ಣೆ ದಿ ಗ್ರೇಟ್’ ತುಳು ಸಿನಿಮಾ ಮೂಲಕ ಯಶಸ್ಸಿನ ಕೀರ್ತಿ ಶಿಖರವನ್ನೇರಿರುವ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಇದೀಗ ‘ಭೋಜರಾಜ್ ಎಂಬಿಬಿಎಸ್’ ತುಳು ಸಿನಿಮಾ ಮಾಡುತ್ತಿದ್ದಾರೆ. ಈ ಹಾಸ್ಯಮಯ ಸಿನಿಮಾ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸತನಕ್ಕೆ ಸಾಕ್ಷಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇನ್ನೇನು ಕ್ಲೈಮ್ಯಾಕ್ಸ್ ಘಟ್ಟದಲ್ಲಿರುವಾಗಲೇ ಲಾಕ್’ಡೌನ್ ಘೋಷಣೆಯಾಗಿದ್ದರಿಂದಾಗಿ ನಿರ್ಮಾಣ ಕಾರ್ಯಕ್ಕೂ ವಿಶ್ರಾಂತಿ ನೀಡುವುದೂ ಅನಿವಾರ್ಯವೆನಿಸಿತು.

ಲಾಕ್’ಡೌನ್ ಜಾರಿಯಾದ ಆರಂಭದಲ್ಲಿ ‘ಯಾಕಾದ್ರೂ ಈ ರೀತಿಯ ಸವಾಲು ಎದುರಾಯಿತು? ಎಂದು ನನಗೆ ನಾನೇ ಪ್ರಶ್ನೆ ಹಾಕಿದೆ’ ಎನ್ನುವ ಇಸ್ಮಾಯಿಲ್, ಈ ಲಾಕ್’ಡೌನ್ ಪರಿಸ್ಥಿತಿ ಕಹಿ ನೋವಿನಂತಾಗಬಾರದು. ಅದು ಸಿಹಿ ನೋವಾಗಿರಬೇಕು ಎನ್ನುತ್ತಾಲೇ ಹೊಸ ಸಿನಿಮಾಗಳಿಗೆ ಸಿದ್ಧತೆ ಮಾಡಿಕೊಂಡಿದ್ದಾರಂತೆ.

ಇದನ್ನೂ ಓದಿ.. ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ; ರಿವೀಲ್ ಆಗದ ಸಂಗತಿ ನಿಮಗೆ ಗೊತ್ತಾ?

 

‘ಲಾಕ್ ಡೌನ್ ನನ್ನ ಪಾಲಿಗೆ ರಜೆಯಂತಿಲ್ಲ. ಬದಲಾಗಿ ಹೊಸ ಸಿನಿಮಾಗೆ ತಯಾರಿಗೆ ಅವಕಾಶದಂತಾಯಿತು’ ಎನ್ನುವ ಅವರು, ಈ ಲಾಕ್’ಡೌನ್ ಅವಧಿಯಲ್ಲಿ ಬರೋಬ್ಬರಿ ಎರಡು ಸಿನಿಮಾ ಕಥೆಗಳನ್ನು ಸಿದ್ಧಪಡಿಸಿದ್ದಾರಂತೆ. ಈ ಸಂಗತಿಯನ್ನು ಅವರು ಫೇಸ್ಬುಕ್’ನಲ್ಲಿ ಸ್ನೇಹಿತರ ಜೊತೆ ಹಂಚಿಕೊಂಡಿದ್ದಾರೆ.

ಇಸ್ಮಾಯಿಲ್ ಮೂಡುಶೆಡ್ಡೆ ಅವರು ಮೂಲತಃ ಪತ್ರಕರ್ತರು. ಇದೀಗ ಸಿನಿಮಾ ನಿರ್ದೇಶಕರಾಗಿಯೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅವರ ಇನ್ನೆರಡು ಕಥೆಗಳಿಗೆ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಸ್ತುತ ‘ಭೋಜರಾಜ್ ಎಂಬಿಬಿಎಸ್’ ಸಿನಿಮಾ ನಿರ್ಮಾಣ ಅಂತಿಮ ಹಂತದಲ್ಲಿದೆ. ಹಾಸ್ಯ ದಿಗ್ಗಜರಾದ ಭೋಜರಾಜ ಸುವರ್ಣ, ಅರವಿಂದ್ ಬೋಳಾರ್ ಸೇರಿದಂತೆ ಖ್ಯಾತ ನಟರು ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದು, ಲಾಕ್’ಡೌನ್ ತೆರವಾದ ನಂತರ ಈ ಸಿನಿಮಾಕ್ಕೆ ಅಂತಿಮ ಸ್ಪರ್ಶ ಸಿಗಲಿದೆ ಎನ್ನುತ್ತಾರೆ ಇಸ್ಮಾಯಿಲ್ ಮೂಡುಶೆಡ್ಡೆ.

ಇದನ್ನೂ ಓದಿ..  ಲಾಕ್’ಡೌನ್ ಟೈಮ್.. ನಗಿಸಲು ನಿಮ್ಮ ಮನೆಗೆ ‘ಪಮ್ಮಣ್ಣೆ’

 

Related posts