ನೀವು ಪಾಕ ಪ್ರವೀಣರಲ್ಲವೇ; ಚಿಂತೆ ಬಿಡಿ, ‘ಆಮ್ಚೂರ್’ ಮಾಡಿ

ಲಾಕ್’ಡೌನ್ ಮೂಡ್’ನಿಂದ ಹೊರಬನ್ನಿ.. ಕೆಲಸ ಇಲ್ಲ ಎಂದು ಕೈಚೆಲ್ಲಿ ಕುಳಿತಿದ್ದವರು ಇದೀಗ ಪಾಕ ಪ್ರವೀಣರಾಗಿದ್ದಾರೆ. ಅದರಲ್ಲೂ ಮರೆತುಹೋಗಿದ್ದ ಹಳ್ಳಿ ತಿಂಡಿಗಳು ಮತ್ತೆ ಘಮಘಮಿಸುತ್ತಿದೆ.
ಆ ಸಾಲಿಗೆ ಆಮ್ಚೂರ್ ಕೂಡಾ ಸೇರಿದೆ.

ಏನಿದು ಆಮ್ಚೂರ್? ಇದನ್ನು ಮಾಡುವುದು ಹೇಗೆ ಎಂಬ ಚಿಂತೆಯೇ? ಇಲ್ಲಿದೆ ನೋಡಿ ಪಾಕ ಸೂತ್ರ..

ಬೇಕಾದ ಸಾಮಾಗ್ರಿ:

  • ಮಾವಿನಕಾಯಿ 15
  • ಉಪ್ಪು 5 ಚಮಚ

ಮಾಡುವ ವಿಧಾನ:

  • ಮಾವಿನಕಾಯಿಯನ್ನು ಸಣ್ಣಗೆ ತುಂಡು ಮಾಡಬೇಕು. ಅದನ್ನು ಬಿಸಿಲಿನಲ್ಲಿ 6 -7 ದಿನ ಇಡೀ. ಅದು ಕಂದು ಬಣ್ಣ ಬಂದು ಅದಲ್ಲಿರುವ ಎಲ್ಲ ನೀರಿನ ಅಂಶ ಹೋಗುತ್ತದೆ. ಆಮೇಲೆ ಅದನ್ನು ಒಂದು ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಬೇಕು. ಅದನ್ನು ಜಾಲಿಸಬಹುದು ಅಥವಾ ಹಾಗೆಯೇ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಆಮ್ಚೂರ್ ಸಿದ್ಧವಾಗುತ್ತದೆ.

ಇದನ್ನೂ ಓದಿ.. ಸ್ವಾದಿಷ್ಟಕ್ಕೆ ಮತ್ತೊಂದು ಹೆಸರೇ ‘ಮಾವಿನಕಾಯಿ ತೊಕ್ಕು’

ಇದನ್ನೂ ಓದಿ.. ಮದ್ಯಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್ 

 

Related posts