ಬೆಂಗಳೂರು ರಾಜಧಾನಿ ಹೊರವಲಯದ ಆನೇಕಲ್ ಸಮೀಪದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದಅಗ್ನಿ ದುರಂತ ಭಾರೀ ಸಾವು ನೋವಿಗೆ ಕಾರಣವಾಗಿದೆ. ಶನಿವಾರ ಅಪರಾಹ್ನ 3.30ರ ಸುಮಾರಿಗೆ ಲಾರಿಯಿಂದ ಪಟಾಕಿ ಇಳಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.
11 people dead in a major fire incident at a cracker godown near Attibele, close to Tamil Nadu- Karnataka border. Fire doused, emergency services team continues serach at location for survivors/casualties. Hosur is a major firecracker hub attracting customers from #Bengaluru pic.twitter.com/m0AxYoAAVu
— Harish Upadhya (@harishupadhya) October 7, 2023
ಮೃತಪಟ್ಟವರು ಕಾರ್ಮಿಕರಾಗಿದ್ದು ಬಹುತೇಕರು ಮಂದಿ ತಮಿಳುನಾಡಿನ ಶಿವಕಾಶಿ ಮೂಲದವರೆನ್ನಲಾಗಿದೆ. ಗೋದಾಮಿನ ನಿರ್ಲಕ್ಷ್ಯದಿಂದ ದುರಂತಕ್ಕೆ ಸಂಭವಿಸಿದೆ. ಅಗ್ನಿಶಾಮಕ ನಿಯಮ ಉಲ್ಲಂಘನೆಯು ಈ ಅನಾಹತಕ್ಕೆ ಕಾರಣ ಎನ್ನಲಾಗಿದೆ. ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ, ಪಟಾಕಿ ರವಾನೆ ಮಾಡಿದವರು ಯಾರು? ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಗೋದಾಮು ಮಾಲಿಕರ ಪುತ್ರ ನವೀನ್ ಎಂಬವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಗಾಗಿ ಚಿಕಿತ್ಸೆ ಪಡೆದಿದ್ದಾರೆ. ನವೀನ್ ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.