ಎರ್ನಾಕುಲಂ ಬಳಿ ಸರಣಿ ಸ್ಫೋಟ; ಒಬ್ಬರ ಸಾವು, ಅನೇಕರಿಗೆ ಗಾಯ

ಎರ್ನಾಕುಲಂ: ಕೇರಳದ ಎರ್ನಾಕುಲಂ ಬಳಿ ಕ್ರೈಸ್ತ ಸಮುದಾಯದ ಧಾರ್ಮಿಕ ಸಮಾರಂಭದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು ಸುಮಾರು 24 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯಲ್ಲಿ ಸಮಾವೇಶ ಕೇಂದ್ರದಲ್ಲಿ ಭಾನುವಾರ ಕ್ರೈಸ್ತ ಸಮಾರಂಭ ನೆರವೇರಿತ್ತು. ಸುಮಾರು 2000 ಮಂದಿ ಈ ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಮಾವೇಶ ಆರಂಭವಾಗುತ್ತಿದ್ದಂತೆಯೇ ನಿಗೂಢ ಸ್ಫೋಟ ಸಂಭವಿಸಿದೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು ಜನರು ದಿಕ್ಕಾಪಾಲಾಗಿ ಓದಿದ್ದಾರೆ. ಅಷ್ಟರಲ್ಲೇ ಮತ್ತೊಂದು ಸ್ಫೋಟ ನಡೆದಿದೆ. ಹೀಗೆ ಸರಣಿ ಸ್ಫೋಟ ಸಂಭವಿಸಿದ್ದು ಸಮಾವೇಶ ಸ್ಥಳ ಭೀಕರ ಘಟನೆಗೆ ಸಾಕ್ಷಿಯಾಯಿತು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಪರಿಹಾರ ಕಾರ್ಯಾಚರಣೆ ಕೈಗೊಂಡಿತು.

Related posts