ಘಾಟಿ ಕ್ಷೇತ್ರದಲ್ಲಿ ‘ಕಾದಲನ್’; ಪ್ರಭುದೇವ್ ಸೆಲ್ಫೀಗಾಗಿ ಮುಗಿಬಿದ್ದ ಜನ

ದೊಡ್ಡಬಳ್ಳಾಪುರ: ಭಾರತದ ಮೈಕೆಲ್‌ ಜಾಕ್ಸನ್‌ ಎಂದು ಖ್ಯಾತರಾದ ಖ್ಯಾತ ಬಹುಭಾಷಾ ಚಲನಚಿತ್ರ ನಟ, ನಿರ್ದೇಶಕ, ಕೊರಿಯೊಗ್ರಾಫರ್ ಪ್ರಭುದೇವ ಅವರು ಸೋಮವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ದೇವಾಲಯದ ವತಿಯಿಂದ ನಟ ಪ್ರಭುದೇವ ಅವರನ್ನು ಸನ್ಮಾನಿಸಿ ಪ್ರಸಾದ ವಿತರಿಸಲಾಯಿತು. ನಟ ಪ್ರಭುದೇವ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯ ಸೇರಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪ್ರಭುದೇವ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು‌‌ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಕ‌ ಅಧಿಕಾರಿ ಕೃಷ್ಣಪ್ಪ, ಪ್ರಧಾನ‌ ಅರ್ಚಕ‌ ನಾಗೇಂದ್ರ ಶರ್ಮಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts