ಜನಗಣತಿ–2027: ಸ್ವಯಂ-ಗಣತಿ ಪ್ರಾರಂಭ

ಬೆಂಗಳೂರು: ರಾಷ್ಟ್ರೀಯ ಜನಗಣತಿ–2027 ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಗಳು ಬುಧವಾರ ಆರಂಭಗೊಂಡಿವೆ. ಈ ಬಾರಿ ನಾಗರಿಕರಿಗೆ ಸ್ವಯಂ-ಗಣತಿಯ ಆಯ್ಕೆಯನ್ನು ನೀಡಲಾಗಿದ್ದು, ಮನೆಯ ವಿವರಗಳನ್ನು ಆನ್‌ಲೈನ್ ಮೂಲಕಲೇ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ-ಗಣತಿ ನಡೆಸಲು https://se.census.gov.in ಪೋರ್ಟಲ್ ಸಕ್ರಿಯವಾಗಿದೆ. ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15–20 ನಿಮಿಷಗಳಲ್ಲಿ ಮಾಹಿತಿಯನ್ನು ದಾಖಲು ಮಾಡಬಹುದು. ನೋಂದಣಿಯ ನಂತರ Self-Enumeration ID ಮೊಬೈಲ್ ಅಥವಾ ಇಮೇಲ್ ಮೂಲಕ ಕಳುಹಿಸಲಾಗುತ್ತದೆ.

ಎರಡನೇ ಹಂತವಾಗಿ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ–ಮನೆಗೆ ಭೇಟಿ ನೀಡಿ ಸ್ಥಳೀಯ ಪರಿಶೀಲನೆ ನಡೆಸಲಿದ್ದಾರೆ. ಸ್ವಯಂ-ಗಣತಿ ಮಾಡಿದವರು ತಮ್ಮ Self-Enumeration ID ಅನ್ನು ಗಣತಿದಾರರಿಗೆ ನೀಡುವುದು ಅಗತ್ಯ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳುವಂತೆ, ಜನಗಣತಿಯಲ್ಲಿ ಸಂಗ್ರಹವಾಗುವ ಮಾಹಿತಿ ಭವಿಷ್ಯದ ನಗರ ಯೋಜನೆ, ಸಾರಿಗೆ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳ ಆಧಾರವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.

Related posts