ಬೆಂಗಳೂರು: ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತ ಉಪವಾಸ ಮುಷ್ಕರ ಕೈಗೊಳ್ಳುವ ಹಿಂದಿನ ದಿನವೇ ಮಧ್ಯರಾತ್ರಿ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲರನ್ನ ಪೊಲೀಸರು ಬಂಧಿಸಿದರೂ ಸಹ ಲೆಕ್ಕಿಸದೆ ಉಪವಾಸ ಮುಂದುವರಿಕೆ ನಾಲ್ಕನೇ ದಿನದಲ್ಲಿ ಮುಂದುವರಿದಿದೆ. ಬಂಧಿತ ರೈತ ನಾಯಕನನ್ನು ಬಿಡುಗಡೆ ಮಾಡಿ ದಲೈವಾಲರನ್ನು ಚಳುವಳಿ ಜಾಗಕ್ಕೆ ವಾಪಸ್ ಕರೆದುಕೊಂಡು ಬನ್ನಿ ನಂತರ ಸರ್ಕಾರದ ಜೊತೆ ಮಾತುಕತೆ ಎಂದು ಪಂಜಾಬ್ ಸರ್ಕಾರಕ್ಕೆ ಎಚ್ಚರಿಕೆಯನ್ನು ಚಳುವಳಿಗಾರರು ನೀಡಿದ್ದು, ಒತ್ತಡಕ್ಕೆ ಮಣಿದ ಮಣಿದ ಪೊಲೀಸರು ರೈತನಾಯಕರನ್ನು ವಾಪಸ್ ಕರೆತಂಡಿದ್ದಾರೆ.
ಈ ಹೋರಾಟ ಕುರಿತಂತೆ ಮಾಹಿತಿ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚ ರಾಜಕೀಯೆತರ ಸಂಘಟನೆಯ ದಕ್ಷಿಣ ಭಾರತ ಸಂಚಾಲಕ. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕದಲ್ಲಿಯೂ ದೆಹಲಿಗೆ ರೈತ ಹೋರಾಟ ಬೆಂಬಲಿಸಿ ಡಿಸೆಂಬರ್ 6 ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ.
ದೇಶದ ರೈತರ ಒಳಿತಿಗಾಗಿ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಗೆ ತರಬೇಕು ರೈತರ ಸಾಲ ಸಂಪೂರ್ಣ ಮನ್ನಾ ಆಗಭೇಕು.60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ. ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಂದು ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ
ರೈತ ಮುಖಂಡರನ್ನು ದೇಶದ್ರೋಹಿಗಳು. ಕಳ್ಳ ಕಾಕರು ರೀತಿಯಲ್ಲಿ ಬಂಧಿಸಿ ದೇಶದ ರೈತರಿಗೆ ಅಪಮಾನ ಮಾಡಿದ್ದಾರೆ. ಬಂದಿತ ರೈತ ಮುಖಂಡರನ್ನು ಬೆಂಬಲಿಸಿ ನೂರಾರು ರೈತರು ಕನೋರಿ ಬಾರ್ಡರ್’ನಲ್ಲಿ ಉಪವಾಸ ಕುಳಿತಿದ್ದಾರೆ ಈ ಸತ್ಯಾಗ್ರಹ 4ನೇ ದಿನಕ್ಕೆ ಮುಂದುವರೆದಿದೆ. ಸರ್ಕಾರ ರೈತರ ಹಕ್ಕನ್ನ ದಮನ ಮಾಡಲು ಯತ್ನಿಸುತ್ತಿದೆ. ಸರ್ಕಾರದ ವರ್ತನೆಯನ್ನು ಖಂಡಿಸುತ್ತೆನೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಭಾನುವಾರದಿಂದ ಕರ್ನಾಟಕದ ವಿಭಾಗ ಮಟ್ಟದಲಿ ಬೆಳಗಾವಿ ಬಿಜಾಪುರ ರಾಯಚೂರು, ಮೈಸೂರು ಜಿಲ್ಲೆಗಳಲ್ಲಿ ರೈತ ಜಾಗೃತಿ ಸಮಾವೇಶ ನಡೆಸಿ ರೈತರ ಜಾಗೃತಿ ಮೂಡಿಸಿ ರಾಜ್ಯದಲ್ಲಿಯೂ ಗಂಭೀರ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದವರು ಮಾಹಿತಿ ಒದಗಿಸಿದ್ದಾರೆ.
ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ರೈತ ಚಳುವಳಿಯ ಬಗ್ಗೆ ವರದಿ ನೀಡಲು ಸರ್ವೋಚ್ಚ ನ್ಯಾಯಾಲಯ ಸಮಿತಿಯನ್ನು ರಚಿಸಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ಇದೇ 22ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆರಂಭಿಕ ವರದಿಯನ್ನು ನೀಡಿದೆ. ರೈತರ ಆತ್ಮಹತ್ಯೆ ಆಗುತ್ತಿರುವುದು ಸರಿಯಾದ ಮಾರುಕಟ್ಟೆ ಇಲ್ಲದೆ ಇರುವುದು. ಉತ್ಪಾದನೆ ವೆಚ್ಚಕ್ಕೆ ಬೆಂಬಲ ಬೆಲೆ ಕಡಿಮೆ ಇರುವುದು ಗಂಭೀರವಾಗಿದೆ ಆದ್ದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಆದ್ದರಿಂದ ಎಂ ಎಸ್ ಪಿ ಖಾತ್ರಿ ಕಾನೂನು ಜಾರಿ ಮಾಡಲು ಕೇಂದ್ರಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವರದಿ ನೀಡಿದೆ. ಈ ವರದಿ ನೀಡಿದ ಎರಡು ಮೂರು ದಿನದಲ್ಲಿ ಕೇಂದ್ರ ಸರ್ಕಾರ ರೈತ ಚಳುವಳಿಯನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿರುವ ಕುರುಬೂರು ಶಾಂತಕುಮಾರ್, ಸಂವಿಧಾನ ದಿನ ಆಚರಣೆ ಮಾಡುವ ಸರ್ಕಾರಕ್ಕೆ ಹಕ್ಕುಗಳಿಗಾಗಿ ಹೋರಾಟ ಮಾಡುವ ರೈತ ಮುಖಂಡರನ್ನು ಬಂಧನ ಮಾಡಿರುವುದು ಖಂಡನೀಯ. ಕೂಡಲೇ ಸಮಸ್ಯೆಗೆ ಕೇಂದ್ರ ಸರ್ಕಾರ ಮುಖಂಡರ ಜೊತೆ ಮಾತುಕತೆ ನಡೆಸಿ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ನೀಡುತ್ತಿದ್ದ ನರ್ಬಾಡ್ ಹಣ ಕಡಿತ ರೈತರಿಗೆ ಬಡ್ಡಿ ರಹಿತ ಕೃಷಿ ಸಾಲ ತಪ್ಪಿಸುವ. ಹುನ್ನಾರವಾಗಿ ಇದು ರಾಜ್ಯದ ರೈತರಿಗೆ ಮರ್ಮಗಾತವಾಗಿದೆ. ರಾಜ್ಯದ ಎಲ್ಲಾ ಸಂಸದರು ಕೇಂದ್ರ ಸರ್ಕಾರ ಕಡಿತ ಮಾಡಿರುವ 50 ರಷ್ಟು ರಾಜ್ಯದ ಹಣವನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.