ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ʼರಸಗೊಬ್ಬರ ಅಭಾವʼ ಬಿಂಬಿಸಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಲು ಆರಂಭಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ರಸಗೊಬ್ಬರ ಪೂರೈಕೆಯಾದರೂ ರಾಜ್ಯ ಸರ್ಕಾರ ಅಗತ್ಯವಿರುವಲ್ಲಿ ರೈತರಿಗೆ ರಸಗೊಬ್ಬರ ತಲುಪಿಸದೆ ತೀರಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಜನವರಿ-ಮಾರ್ಚ್ ಅವಧಿಯಲ್ಲೇ ಅಗತ್ಯಕ್ಕಿಂತ ಹೆಚ್ಚುವರಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್ಪಿಕೆಎಸ್ ಅನ್ನು ರಾಜ್ಯಕ್ಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅದಾಗಲೇ ಜೂನ್ 10 ರ ವರೆಗೆ ಯೂರಿಯಾ 3.13 ಲಕ್ಷ ಮೆಟ್ರಿಕ್ ಟನ್ (LMT) ಅಗತ್ಯತೆಯಲ್ಲಿ 5.59 LMT ಲಭ್ಯತೆಯನ್ನು ಖಾತರಿಪಡಿಸಿದೆ. ಡಿಎಪಿ 1.89 LMT ಅಗತ್ಯತೆಯಲ್ಲಿ 2.57 LMT ಲಭ್ಯತೆ ಖಚಿತಪಡಿಸಿದ್ದು, ಪ್ರಸ್ತುತ ದಾಸ್ತಾನು 1.09 LMT ಇದೆ. ಹೆಚ್ಚುವರಿ ರಸಗೊಬ್ಬರ ಪೂರೈಕೆಯಲ್ಲಿದೆ. ಎನ್ಪಿಕೆಎಸ್: 4.36 LMT ಅಗತ್ಯತೆಯಿದ್ದರೆ 9.28 LMT ಲಭ್ಯತೆ ಖಾತರಿಪಡಿಸಲಾಗಿತ್ತು. ಗಣನೀಯ ಪ್ರಮಾಣದ ಮಾರಾಟದ ನಂತರವೂ 5.6 ಲಕ್ಷ LMTಗೂ ಹೆಚ್ಚು ರಸಗೊಬ್ಬರ ಲಭ್ಯವಿದೆ ಎಂದು ಬಿಜೆಪಿ ತನ್ನ X ಖಾತೆಯಲ್ಲಿ ಬರೆದುಕೊಂಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ಜಿಲ್ಲೆಗಳ ನಡುವೆ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡದೆ, ದಾಸ್ತಾನು ದಂಧೆ, ಕಾಳಸಂತೆ ತಡೆಗಟ್ಟದೇ ರೈತರಿಗೆ ವಂಚಿಸುತ್ತಿದೆ. ಈ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಭಾಗಿಯಾದಂತೆ ಕಾಣುತ್ತಿದೆ ಎಂದು ಬಿಜೆಪಿ ಹೇಳಿದೆ.
ರಾಜ್ಯದ @INCKarnataka ಸರ್ಕಾರ ʼರಸಗೊಬ್ಬರ ಅಭಾವʼ ಬಿಂಬಿಸಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಲು ಆರಂಭಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ರಸಗೊಬ್ಬರ ಪೂರೈಕೆಯಾದರೂ ರಾಜ್ಯ ಸರ್ಕಾರ ಅಗತ್ಯವಿರುವಲ್ಲಿ ರೈತರಿಗೆ ರಸಗೊಬ್ಬರ ತಲುಪಿಸದೆ ತೀರಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ.
ಜನವರಿ-ಮಾರ್ಚ್ ಅವಧಿಯಲ್ಲೇ… pic.twitter.com/oNmDtn3bft
— BJP Karnataka (@BJP4Karnataka) June 15, 2026

