‘ಆಪರೇಷನ್ ಸಫೇದ್ ಸಾಗರ್’ ; ಕಾರ್ಗಿಲ್ ಯುದ್ಧದ ಪ್ರತಿಬಿಂಬ?

ಮುಂಬೈ: ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ಸಾಹಸಮಯ ಕಾರ್ಯಾಚರಣೆಯಿಂದ ಪ್ರೇರಿತವಾದ ವೆಬ್ ಸರಣಿ ‘ಆಪರೇಷನ್ ಸಫೇದ್ ಸಾಗರ್’ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಓನಿ ಸೇನ್ ನಿರ್ದೇಶನದ ಈ ಸರಣಿ ಯುದ್ಧದ ಹಿಂದಿನ ವಾಯುಪಡೆಯ ಸಿಬ್ಬಂದಿಯ ಧೈರ್ಯ, ತ್ಯಾಗ ಮತ್ತು ಕರ್ತವ್ಯನಿಷ್ಠೆಯನ್ನು ಚಿತ್ರಿಸುತ್ತದೆ.

ಸರಣಿಯಲ್ಲಿ ಜಿಮ್ಮಿ ಶೆರ್ಗಿಲ್, ಅಭಯ್ ವರ್ಮಾ, ದಿಯಾ ಮಿರ್ಜಾ, ಪ್ರಜಕ್ತಾ ಕೋಲಿ, ಆದಿಲ್ ಹುಸೇನ್, ಮಿಹಿರ್ ಅಹುಜಾ, ತಾರುಕ್ ರೈನಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ನೆಟ್‌ಫ್ಲಿಕ್ಸ್ ಇಂಡಿಯಾದ ಸರಣಿ ವಿಭಾಗದ ಮುಖ್ಯಸ್ಥೆ ತಾನ್ಯಾ ಬಾಮಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಯ ಪಾತ್ರದಿಂದ ಪ್ರೇರಿತವಾದ ಮೊದಲ ಸರಣಿಯಿದು ಎಂದು ಹೇಳಿದ್ದಾರೆ. ‘ಗೋಲ್ಡನ್ ಆರೋಸ್’ ಸ್ಕ್ವಾಡ್ರನ್‌ನ ಧೈರ್ಯ ಮತ್ತು ತ್ಯಾಗಕ್ಕೆ ಈ ಸರಣಿ ಗೌರವ ಸಲ್ಲಿಸುತ್ತದೆ ಎಂದರು.

ಮ್ಯಾಚ್‌ಬಾಕ್ಸ್ ಶಾಟ್ಸ್ ಹಾಗೂ ಫೀಲ್ ಗುಡ್ ಫಿಲ್ಮ್ಸ್ ನಿರ್ಮಿಸಿರುವ ‘ಆಪರೇಷನ್ ಸಫೇದ್ ಸಾಗರ್’ ಆಗಸ್ಟ್ 7ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

Related posts