ದೋಹಾ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜನೆಯ ಪುರುಷರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿ ನವೆಂಬರ್ 19ರಿಂದ 29ರವರೆಗೆ ಕತಾರ್ನ ದೋಹಾದಲ್ಲಿ ನಡೆಯಲಿದೆ. ಕಳೆದ ಆವೃತ್ತಿ ಟಿ20 ಮಾದರಿಯಲ್ಲಿ ನಡೆದಿದ್ದರೆ, ಈ ಬಾರಿ ಪಂದ್ಯಾವಳಿ 50 ಓವರ್ಗಳ ಮಾದರಿಯಲ್ಲಿ ನಡೆಯಲಿದೆ.
ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎನಲ್ಲಿ ಶ್ರೀಲಂಕಾ ಎ, ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಮತ್ತು ಹಾಂಗ್ ಕಾಂಗ್ ತಂಡಗಳಿವೆ. ಗುಂಪು ಬಿನಲ್ಲಿ ಭಾರತ ಎ, ಪಾಕಿಸ್ತಾನ ಎ, ನೇಪಾಳ ಮತ್ತು ಯುಎಇ ತಂಡಗಳಿವೆ.

ಲೀಗ್ ಹಂತದಲ್ಲಿ ಪ್ರತಿ ತಂಡ ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ಧ ಆಡಲಿದೆ. ಒಟ್ಟು 12 ಪಂದ್ಯಗಳು ನಡೆಯಲಿದ್ದು, ಎರಡೂ ಗುಂಪುಗಳ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಭಾರತ ಎ ತಂಡದ ವೇಳಾಪಟ್ಟಿ:
- ನ.20: ಭಾರತ ಎ ವಿರುದ್ಧ ನೇಪಾಳ – ದೋಹಾದ ವೆಸ್ಟ್ ಎಂಡ್ ಪಾರ್ಕ್
- ನ.22: ಭಾರತ ಎ ವಿರುದ್ಧ ಪಾಕಿಸ್ತಾನ ಎ – ದೋಹಾದ ವೆಸ್ಟ್ ಎಂಡ್ ಪಾರ್ಕ್
- ನ.24: ಭಾರತ ಎ ವಿರುದ್ಧ ಯುಎಇ – ಯೂನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ

