ಸೌದಿ ಅರೇಬಿಯಾ–ಹೌತಿಗಳ ನಡುವೆ ಕ್ಷಿಪಣಿ, ಡ್ರೋನ್ ದಾಳಿ ತೀವ್ರ

ರಿಯಾದ್: ಸೌದಿ ಅರೇಬಿಯಾ ಮತ್ತು ಯೆಮನ್‌ನ ಹೌತಿ ಬಂಡುಕೋರರ ನಡುವೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ತೀವ್ರಗೊಂಡಿವೆ. ರಿಯಾದ್, ದಮ್ಮಾಮ್, ನಜ್ರಾನ್ ಸೇರಿದಂತೆ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ಹೌತಿಗಳು ಏಳು ದಾಳಿಗಳಿಗೆ ಯತ್ನಿಸಿದ್ದು, ಸೌದಿ ನೇತೃತ್ವದ ಮೈತ್ರಿಕೂಟ ಹಲವು ಕ್ಷಿಪಣಿಗಳನ್ನು ತಡೆದಿದೆ ಎಂದು ವರದಿಯಾಗಿದೆ.

ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಯಾನ್ಬುವಿನ ಸೌದಿ ಅರಾಮ್ಕೊ ತೈಲ ಘಟಕಗಳೂ ಗುರಿಯಾಗಿದ್ದವು ಎನ್ನಲಾಗಿದೆ. ತಡೆದ ಕ್ಷಿಪಣಿಗಳ ಅವಶೇಷಗಳು ಮಕ್ಕಾ ಮತ್ತು ಮದೀನಾ ಪ್ರದೇಶಗಳಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ಆದರೆ, ಈ ಪ್ರದೇಶಗಳ ಮೇಲೆ ದಾಳಿ ನಡೆಸಿದ ಆರೋಪವನ್ನು ಹೌತಿಗಳು ನಿರಾಕರಿಸಿದ್ದಾರೆ.

 ಯೆಮನ್‌ನ ಹೌತಿ ನಿಯಂತ್ರಿತ ಪ್ರದೇಶಗಳಲ್ಲಿ 100 ವಾಯುದಾಳಿಗಳು ನಡೆದಿವೆ ಎಂದು ಬಂಡುಕೋರರು ಆರೋಪಿಸಿದ್ದು, ಸನಾ ಪ್ರಾಂತ್ಯದ ಕಾರ್ಮಿಕರ ವಸತಿ ಪ್ರದೇಶದ ಮೇಲಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೌತಿ ಮಾಧ್ಯಮಗಳು ವರದಿ ಮಾಡಿವೆ.

Related posts