ಕಾರ್ಕಳ ಸಮೀಪ ಮುಂಡ್ಕೂರು ಬಳಿ ಭೀಕರ ಅಗ್ನಿ ದುರಂತ; ಕಾರ್ಖಾನೆ ಭಸ್ಮ

ಉಡುಪಿ : ಕಾರ್ಕಳ ಸಮೀಪದ ಮುಂಡ್ಕೂರು ಬಳಿ ಭೀಕರ ಅಗ್ನಿ ದುರಂತ ಸಂಭವಿಸಿ ಕಟ್ಟಡವೊಂದು ಧಗಧಗಿಸಿ ಹೊತ್ತಿ ಉರಿದಿದೆ. ಆಭರಣ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಈ ಅಗ್ನಿ ದುರಂತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುತ್ತು ಕರಕಲಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಈ ಘಟಕದಲ್ಲಿ ಸಂಗ್ರಹವಿದ್ದ ಸಿದ್ಧ ವಸ್ತುಗಳು, ಕಚ್ಚಾ ವಸ್ತುಗಳು ಹಾಗೂ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿವೆ. ಸುಮಾರು 15 ಲಕ್ಷ ರೂಪಾಯಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಸುಧೀರ್ ಶೆಣೈ ಎಂಬವರಿಗೆ ಸೇರಿದ ಸಂಸ್ಥೆ ಇದಾಗಿದೆ.

ಪಠ್ಯಕ್ರಮ ವಿಚಾರ; ಮೋದಿ ಸರ್ಕಾರಕ್ಕೆ ಸಿದ್ದು ಗುದ್ದು

ಬೆಂಗಳೂರು: ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಆಗಾಗ್ಗೆ ಚಾಟಿ ಬೀಸುತ್ತಿರುವ ಕಾಂಗ್ರೆಸ್ ಧುರೀಣ ಸಿದ್ದರಾಮಯ್ಯ, ಇದೀಗ ಪಠ್ಯಕ್ರಮ ವಿಚಾರದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ತೀರ್ಮಾನ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಪೌರತ್ವ, ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ಫೆಡರಲಿಸಂ ಕುರಿತ ಪಾಠಗಳನ್ನು ಸಿಬಿಎಸ್ಇ ಪಠ್ಯಕ್ರಮದಲ್ಲಿ ಕೈಬಿಟ್ಟಿರುವ ಕೇಂದ್ರ ಸರ್ಕಾರವನ್ನು ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನವ ಸಂಪನ್ಮೂಲ ಸಚಿವಾಲಯ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳ ಬಗೆಗಿನ ತಿಳಿಯುವಳಿಕೆಗಳಿಂದ ಮಕ್ಕಳನ್ನು ವಂಚಿತರನ್ನಾಗಿಸಿದಂತಾಗುತ್ತದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. I strongly condemn the decision of @HRDMinistry to drop Chapters on Citizenship, Secularism & Federalism. This will deprive a generation of students from understanding the important pillars of…

ಇಂದು 10ನೇ ಮತ್ತು 12 ನೇ ತರಗತಿ ಫಲಿತಾಂಶ

ದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಲಾಕ್’ಡೌನ್ ಜಾರಿಯಾಗಿದ್ದರಿಂದಾಗಿ ವಿಳಂಬವಾಗಿದ್ದ ಐಸಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. 10ನೇ ತರಗತಿ ಮತ್ತು 12 ನೇ ತರಗತಿ ಫಲಿತಾಂಶ ಬೋರ್ಡ್ ವೆಬ್‌ಸೈಟ್ ಮತ್ತು ಎಸ್‌ಎಂಎಸ್ ಮೂಲಕ ಫಲಿತಾಂಶಗಳು ಲಭ್ಯವಾಗಲಿವೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಫಲಿತಾಂಶಕ್ಕಾಗಿ www.results.cisce.org ಲಿಂಕ್ ಕ್ಲಿಕ್ ಮಾಡಿ  

ನಿಲ್ಲದ ಕೊರೋನಾ ಹಾವಳಿ; ದೇಶದಲ್ಲಿ ಒಂದೇ ದಿನ 26,506 ಮಂದಿಯಲ್ಲಿ ಸೋಂಕು

ದೆಹಲಿ: ಭಾರತ ಕೊರೋನಾ ಕಂಟಕದಿಂದ ಪಾರಾಗಲಿದೆಯೇ ಎಂಬ ಸಂಶಯ ಉಂಟಾಗಿದೆ. ಈಗಾಗಲೇ ಅತೀ ಹೆಚ್ಚು ಕೊರೋನಾ ಸೋಂಕಿತರಿರುವ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಡೈನ್ ಡೈನ್ ಸೋಂಕು ಉಲ್ಬಣಗೊಳ್ಳುತ್ತಿದೆ. ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಗುರುವಾರ ಮತ್ತೊಮ್ಮೆ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿಯಂತೆ ನಿನ್ನೆ ಒಂದೇ ದಿನ 26,506 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಕೋವಿಡ್ ೧೯ ಸೋಂಕಿತರ ಸಂಖ್ಯೆ 7,93,802ಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೋನಾ ಸೋಂಕಿಗೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿವೆ. ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ 475 ಮಂದಿ ಬಲಿಯಾಗಿದ್ದು ಕೊರೋನಾದಿಂದಾಗಿ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿನ ಸಂಖ್ಯೆ 21,604ಕ್ಕೆ ತಲುಪಿದೆ.

ಪೊಲೀಸ್ ಎನ್ಕೌಂಟರ್’ನಲ್ಲಿ ಪಾತಕಿ ವಿಕಾಸ್‌ ದುಬೆ ಹತ್ಯೆ

ಲಕ್ನೋ: ಖಾಕಿ ಕಾರ್ಯಾಚರಣೆ ವೇಳೆ ಎಂಟು ಮಂದಿ ಪೊಲೀಸರ ನರಮೇಧಕ್ಕೆ ಕಾರಣನಾಗಿದ್ದ ಕುಖ್ಯಾತ ರೌಡಿ‌ ವಿಕಾಸ್‌ ದುಬೆ ಕೊನೆಗೂ ಶವವಾಗಿ ಪೊಲೀಸರ ವಶವಾಗಿದ್ದಾನೆ. ಹಲವು ದಿನಗಳಿಂದ ಉತ್ತರ ಪ್ರದೇಶ ಪೊಲೀಸರು ಈತನಿಗಾಗಿ ಬೇಟೆ ಕೈಗೊಂಡಿದ್ದರು. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಬಂಧನಕ್ಕೊಳಗಾಗಿದ್ದ ವಿಕಾಸ್‌ ದುಬೆ ನನ್ನು ಕಾನ್ಪುರಕ್ಕೆ ಕರೆದೊಯ್ಯುವ ವೇಳೆ ನಡೆದ ಎನ್ಕೌಂಟರ್’ನಲ್ಲಿ ಆತ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಗುರುವಾರ ವಿಕಾಸ್ ದುಬೆಯನ್ನು ಸ್ಥಳೀಯ ಪೊಲೀಸರು ಬಂಧಿಸಿ ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಆತನನ್ನು ಕಾನ್ಪುರಕ್ಕೆ ಕರೆದೊಯ್ಯುವ ವೇಳೆ ಪೊಲೀಸರ ವಾಹನ ಮಗುಚಿದೆ. ಭಾರೀ ಮಳೆಯ ನಡುವೆ ವಾಹನ ಪಲ್ಟಿಯಾಗಿದ್ದು, ಆವೇಳೆ ಭಾರೀ ಸದ್ದು ಕೇಳಿಸಿಕೊಂಡಿದೆ. ಆ ವೇಳೆಗಾಗಲೇ ವಿಕಾಸ್ ದುಬೆ ಪೊಲೀಸರ ರಿವಾಲ್ವರ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ನಡೆದ ಎನ್ಕೌಂಟರ್’ನಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ.. ಯೋಗಿಯ ನಾಡಲ್ಲಿ…

ಮಂಗಳೂರಿನಲ್ಲಿ ಕಾಶೀಮಠಾಧೀಶರ ಚಾತುರ್ಮಾಸ್ಯ ವ್ರತ ಆರಂಭ

ಮಂಗಳೂರು: ಗೌಡ ಸಾರಸ್ವತ ಸಮಾಜದ ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಮಂಗಳೂರಿನ ಕೊಂಚಾಡಿ ಕ್ಷೇತ್ರದ  ಶ್ರೀ ಕಾಶೀ ಶಾಖಾಮಠದಲ್ಲಿ ಆರಂಭವಾಗಿದೆ. ಶುಕ್ರವಾರ ಮೃತಿಕಾ ಪೂಜನೆಯೊಂದಿಗೆ ಕೈಂಕರ್ಯವನ್ನು ಆರಂಭಿಸಲಾಯಿತು. ಪ್ರಾತಃ ಕಾಲ ಶ್ರೀ ಸಂಸ್ಥಾನದ ಶ್ರೀ ದೇವತೆಗಳಿಗೆ ಪಂಚಾಮೃತ, ಗಂಗಾಭಿಷೇಕ , ಲಘು ವಿಷ್ಣು ಅಭಿಷೇಕ , ಶತಕಲಶಾಭಿಷೇಕ, ಪವಮಾನ ಅಭಿಷೇಕಗಳನ್ನು ಶ್ರೀಗಳು ನೆರವೇರಿಸಿದರು. ಇದೇ ಸಂದರ್ಭದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ ಅನಿವಾರ್ಯವಾದ್ದುದರಿಂದ ಸಮಾಜ ಭಾಂದವರಿಗೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ. ಈ ನಡುವೆ ಸಂಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ ಸೇವೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ. ಆಸಕ್ತ ಭಕ್ತರು ದೂರವಾಣಿ ಸಂಖ್ಯೆಗಳಿಗೆ 9449362909, 9448845909 ಸಂಪರ್ಕಿಸ ಬಹುದೆಂದು ಮಠದ ಪ್ರಮುಖರು ತಿಳಿಸಿದ್ದಾರೆ. ಜೂನ್  30 ರಿಂದಲೇ ಉತ್ಸವದ ಸಂಭ್ರಮ ಚಾತುರ್ಮಾಸ್ಯ ವೃತದ ಪ್ರಯುಕ್ತ ಸಂಯಮೀಂದ್ರ ತೀರ್ಥರು ಜೂನ್  30ರಂದು ಕೊಂಚಾಡಿ…

ಶ್ರುತಿ ಹಾಸನ್ ಅವರ ‘ಯಾರಾ’ ಸಂಚಲನ

ಶ್ರುತಿ ಹಾಸನ್ ಅವರ ‘ಯಾರಾ’ ಸಿನಿಮಾ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟ ವಿದ್ಯುತ್ ಜಮ್ಮವಾಲ್ ಮತ್ತು ಶೃತಿ ಹಾಸನ್ ‘ಯಾರಾ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಾಮಿಡಿ ಸೀನ್’ಗಳು, ಮೆಲೋಡಿಯಸ್ ಸಾಂಗ್’ಗಳು ಈ ಚಿತ್ರದ ಕೌತುಕವನ್ನು ಹೆಚ್ಚಿಸಿದೆ. ಈ ಟ್ರೈಲರ್ ನೋಡುಗರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತದೆ. ತಿಮಂಗ್ಶು ದುಲಿಯಾ ‘ಯಾರಾ’ ಕಟ್ ಹೇಳಿದ್ದಾರೆ, ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ.. ಸುಶಾಂತ್ ಸಿಂಗ್ ಅಭಿನಯದ ‘ದಿಲ್ ಬೆಚಾರ’ ಚಿತ್ರದ ಟ್ರೇಲರ್ ಸಕತ್ ಸದ್ದು   

ಐಸಿಎಸ್‌ಇ 10ನೇ ಮತ್ತು 12 ನೇ ತರಗತಿ ಫಲಿತಾಂಶ ಇಂದು ಪ್ರಕಟ

ದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಲಾಕ್’ಡೌನ್ ಜಾರಿಯಾಗಿದ್ದರಿಂದಾಗಿ ವಿಳಂಬವಾಗಿದ್ದ ಐಸಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. 10ನೇ ತರಗತಿ ಮತ್ತು 12 ನೇ ತರಗತಿ ಫಲಿತಾಂಶ ಬೋರ್ಡ್ ವೆಬ್‌ಸೈಟ್ ಮತ್ತು ಎಸ್‌ಎಂಎಸ್ ಮೂಲಕ ಫಲಿತಾಂಶಗಳು ಲಭ್ಯವಾಗಲಿವೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಫಲಿತಾಂಶಕ್ಕಾಗಿ www.results.cisce.org ಲಿಂಕ್ ಕ್ಲಿಕ್ ಮಾಡಿ

ರಾಜ್ಯದಲ್ಲಿ ಒಂದೇ ದಿನ 2228 ಕೊರೋನಾ ಕೇಸ್; ಬೆಂಗಳೂರಿನಲ್ಲಿ 1373 ಮಂದಿಯಲ್ಲಿ ಸೋಂಕು

ರಾಜ್ಯದಲ್ಲಿ ಕೊರೋನಾ ವೈರಾಣು ಸವಾರಿ ಶರವೇಗದಲ್ಲಿದೆ. ಇಂದು ಮತ್ತೆ ಪಾಸಿಟಿವ್ ಕೇಸ್’ಗಳು ಆತಂಕಕಾರಿ ಸಂಖ್ಯೆಯಲ್ಲಿದ್ದು ರಾಜ್ಯದಲ್ಲಿ 2228 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಜುಲೈ 8ರ ಸಂಜೆಯಿಂದ ಇಂದು ಸಂಜೆ ವರೆಗಿನ ಬೆಳವಣಿಗೆಗಳನ್ನಾಧರಿಸಿ ಈ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಬೆಂಗಳೂರು ನಗರವೊಂದರಲ್ಲೇ 1373 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದಾರೆ, ದಕ್ಷಿಣಕನ್ನಡದಲ್ಲಿ 167 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಲಬುರಗಿಯಲ್ಲಿ 85, ಧಾರವಾಡದಲ್ಲಿ 75, ಮೈಸೂರಿನಲ್ಲಿ 52 ಪಾಸಿಟಿವ್ ಪ್ರಕರಣಗಳು ಗೊತ್ತಾಗಿವೆ ಎಂದು ಹೆಲ್ತ್ ಬುಲೆಟಿನ್ ಮಾಹಿತಿ ಬಹಿರಂಗಪಡಿಸಿದೆ. ಈ ನಡುವೆ ಒಂದೇ ದಿನದಲ್ಲಿ 17 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 486 ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಈ ಪ್ರಕಟಣೆ ಹೇಳಿದೆ. ಇಂದಿನ ಪತ್ರಿಕಾ ಪ್ರಕಟಣೆ…

ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ; ಸಂಪುಟ ಅನುಮೋದನೆ

ಬೆಂಗಳೂರು: ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಬೆಂಗಳೂರಿನಲ್ಲಿಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಯಿತು. ಈ ಕುರಿತಂತೆ ಸುದ್ದಿಗಾರರಿಗೆ ವಿವರ ಒದಗಿಸಿದ ಕಾನೂನು ಸಚಿವ ಮಾಧುಸ್ವಾಮಿ, ನೂತನ ತಿದ್ದುಪಡಿಯಂತೆ, ಲೋಕಾಯುಕ್ತ ಪೊಲೀಸರು ಪ್ರಕರಣಗಳ ಪ್ರಾಥಮಿಕ ವಿಚಾರಣೆಯನ್ನು 90 ದಿನದಲ್ಲಿ ಮುಗಿಸಬೇಕು. ಆರು ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದರು. ಇದೇ ವೇಳೆ, 5 ವಿದ್ಯುತ್ ಸರಬರಾಜು ಕಂಪನಿಗಳಿಗೆ 2500 ಕೋಟಿ ರೂಪಾಯಿಗಳನ್ನು ಬಡ್ಡಿರಹಿತ ಸಾಲದ ರೂಪದಲ್ಲಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣಕ್ಕೆ ರೂ. 220 ಕೋಟಿ ಅನುದಾನ ಮೀಸಲಿಡಲು ತೀರ್ಮಾನಿಸಲಾಯಿತು. ಜೊತೆಗೆ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.