ಕೊರೋನಾ ನಿಯಂತ್ರಣಕ್ಕೆ ಕ್ರಮ, ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ; ಸರ್ಕಾರದ ಭರವಸೆ 

ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಾಣು ತಲ್ಲಣ ಸೃಷ್ಟಿಸಿದೆ. ರಾಜ್ಯದಲ್ಲೂ ಕೊರೋನಾ ರಣಕೇಕೆ ಮುಂದುವರಿದಿದ್ದು, ರಾಜಧಾನಿ ಸಹಿತ ಹಲವು ಜಿಲ್ಲೆಗಳಲ್ಲಿ ಟ್ರಾವೆಲ್ ಹಿಸ್ಟರಿ ಗೊತ್ತಾಗದ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ ಬೆಂಗಳೂರಿನಲ್ಲಿ ಪರಿಸ್ಥಿತಿ ಎದುರಿಸಲು ಸರ್ಕಾರ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಸೋಂಕು ಕಡಿಮೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ ಮೀಸಲು ಇಡಲು ಸೂಚನೆ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ. ರೋಗ ಲಕ್ಷಣಗಳು ಇಲ್ಲದವರ ಕ್ವಾರಂಟೈನ್’ಗಾಗಿ ಕಲ್ಯಾಣ ಮಂಟಪ, ವಸ್ತು ಪ್ರದರ್ಶನ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದ ಸಚಿವ ಅಶೋಕ್, ಆಸ್ಪತ್ರೆಗಳಲ್ಲಿ ಬೆಡ್ ಅಲಾಟ್ಮೆಂಟ್ ಬಗ್ಗೆ ಉಸ್ತುವಾರಿಗೆ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಮತ್ತೆ ಲಾಕ್’ಡೌನ್ ಇಲ್ಲ; ಸರ್ಕಾರ ಸ್ಪಷ್ಟನೆ

ಬೆಂಗಳೂರು: ಕೊರೋನಾ ಹಾವಳಿ ಮುಂದುವರಿದಿದ್ದು ರಾಜ್ಯದಲ್ಲಿ ಮತ್ತೆ ಲಾಕ್’ಡೌನ್ ಜಾರಿಗೊಳ್ಳುತ್ತಾ ಎಂಬ ಅನುಮಾನ ಎಲ್ಲರನ್ನೂ ಕಾದಿದೆ. ಲಾಕ್’ಡೌನ್ ಜಾರಿಗೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರಾದರೂ ಸರ್ಕಾರ ಅದಕ್ಕೆ ಒಪ್ಪುತ್ತಿಲ್ಲ. ಬೆಂಗಳೂರಿನಲ್ಲಿಂದು ಸಿಎಂ ಯಡಿಯೂರಪ್ಪ ಬೆಂಗಳೂರಿನ ಶಾಸಕರ ಸಭೆ ಕರೆದು ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಎಲ್ಲಾ ಪಕ್ಷಗಳ ಶಾಸಕರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ರಾಜ್ಯ ಹಾಗೂ ಬೆಂಗಳೂರಿನಲ್ಲಿ ಯಾವುದೇ ಲಾಕ್‍ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಶಾಸಕರ ಸಲಹೆಗಳಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಬೆಂಗಳೂರು ಲಾಕ್’ಡೌನ್’ಗೆ ಕೈ ಶಾಸಕರ ಆಗ್ರಹ; ಸರ್ಕಾರ ನಕಾರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ದಿನೇದಿನೇ ಹೆಚ್ಚುತ್ತಿರುವ ಸೋಂಕಿರರ ಸಂಖ್ಯೆ ಆತಂಕಕಾರಿ ಬೆಳವಣಿಗೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರತರದಲ್ಲಿ ಏರಿಕೆಯಾಗುತ್ತಿವೆ. ಈ ಆತಂಕಕಾರಿ ಬೆಳವಣಿಗೆ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದು ಬೆಂಗಳೂರಿನ ಶಾಸಕರೊಂದಿಗೆ ನಡೆಸಿದ ಸಭೆ ಗಮನಸೆಳೆಯಿತು. ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಶಾಸಕರ ಸಲಹೆ ಕೇಳಿದರು.  ಪ್ರತಿಪಕ್ಷ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಲಾಕ್’ಡೌನ್ ಜಾರಿಗೊಳಿಸಬೇಕೆಂದು ಸಲಹೆ ಮಾಡಿದರು. ಆದರೆ ಇದಕ್ಕೆ ಸಿಎಂ ಯಡಿಯೂರಪ್ಪ ನಿರಾಕರಿಸಿದ್ದಾರೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಾದ ರಾಮಲಿಂಗಾ ರೆಡ್ಡಿ, ಹ್ಯಾರಿಸ್, ರಿಜ್ವಾನ್ ಅರ್ಷದ್ ಮೊದಲಾದವರು ಸರ್ಕಾರದ ನಡೆ ಬಗ್ಗೆ ಅಸಮಾಧಾನ ಹೊರಹಾಕಿದರು. ಮೊದಲು ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ ಮಾಡಿ ಎಂದೂ ಸರ್ಕಾರವನ್ನು ಆಗ್ರಹಿಸಿದರು.

ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಗೆ ಭೂಮಿ‌ ಪೂಜೆ

ಕೊಪ್ಪಳ ಜಿಲ್ಲೆಯ ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಗೆ ಭೂಮಿ‌ ಪೂಜೆ ನೆರವೇರಿಸಲಾಯಿತು. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈ ಕಾಮಗಾರಿಗಳಿಗೆ ಚಾಲನೆ ನೀಡಿದರು.  

‘ಗೋಳಿ ಬಜೆ’ ಮಾಡುವ ವಿಧಾನ ಬಲು ಸುಲಭ.

ಕರಾವಳಿಯ ತಿಂಡಿ ತಿನಿಸುಗಳ ಪೈಕಿ ‘ಗೋಳಿ ಬಜೆ’ ಭಾರೀ ಫೇಮಸ್ಸು. ಮಂಗಳೂರು ಬಜ್ಜಿ ಎಂದೂ ಇದನ್ನು ಕರೆಯಲಾಗುತ್ತದೆ. ಇದೀಗ ಇದು ಕರಾವಳಿಯಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದನ್ನು ತಯಾರಿಸಲು ಅಪ್ರತಿಮ ಪಾಕ ಪ್ರವೀಣರಾಗಬೇಕಿಲ್ಲ. ಮಾಡುವ ವಿಧಾನ ಬಲು ಸುಲಭ.. ಇದನ್ನೂ ಓದಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

ಮಂಗಳೂರಿನ ಐವರು ವೈದ್ಯರಲ್ಲಿ ಕೋವಿಡ್-19 ಸೋಂಕು

ಮಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ಕರಾವಳಿಯಲ್ಲಿ ವೈದ್ಯ ಸಮೂಹಕ್ಕೂ ಪರಿಸ್ಥಿತಿ ಸವಾಲಾಗಿದೆ. ಮಂಗಳೂರಿನ ಐವರು ವೈದ್ಯರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಮಂಗಳೂರಿನ ಕೋವಿಡ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ ಮತ್ತು ಖಾಸಗಿ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ೨೮ ವರ್ಷದ ಯುವಕ, 28 ವರ್ಷದ ಇಬ್ಬರು ಯುವತಿಯರು ಮತ್ತು 27 ವರ್ಷದ ಇಬ್ಬರು ಯುವತಿಯರು ಸೋಂಕಿಗೆ ಒಳಗಾಗಿದ್ದಾರೆ. ವೈದ್ಯರು ಸೋಂಕಿಗೊಳಗಾಗಿರುವ ಹಿನ್ನೆಲೆಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ಸುಮಾರು 30 ಮಂದಿಯನ್ನು ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಜು.31 ವರೆಗೆ ಲಾಕ್’ಡೌನ್

ದೆಹಲಿ: ದೇಶಾದ್ಯಂತ ಕೊರೋನಾ ಆತಂಕಕಾರಿ ರೀತಿಯಲ್ಲಿ ಹರಡುತ್ತಿದೆ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಿದ್ದಾರೆ. ಅತ್ತ ಪಶ್ಚಿಮ ಬಂಗಾಳದಲ್ಲೂ ಪರಿಸ್ಥಿತಿ ವಿಷಮ ರೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಲಾಕ್ ಡೌನ್ ನ್ನು ಜು.31 ವರೆಗೆ ವಿಸ್ತರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಲಾಕ್’ಡೌನ್ ಜಾರಿಯಲ್ಲಿದ್ದು ಜೂ.30ಕ್ಕೆ ಮುಕ್ತಾಯಗೊಳ್ಳಲಿದೆ. ಅದನ್ನು ಜುಲೈ ತಿಂಗಳಾಂತ್ಯದವರೆಗೆ ಮುಂದುವರಿಸಲಾಗಿದೆ. ಆದರೆ ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ 397 ಕೇಸ್; 10 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆತಂಕಕಾರಿ ಪರಿಸ್ಥಿತಿಯನ್ನೇ ತಂದೊಡ್ಡಿದೆ. ಅದರಲ್ಲೂ ಬುಧವಾರದ ಹೆಲ್ತ್ ಬುಲೆಟಿನ್ ವರದಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಒಂದೇ ದಿನ 14 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 164 ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆವರೆಗೆ ರಾಜ್ಯದ ವಿವಿಧೆಡೆ 397 ಮಂದಿ ಯಲ್ಲಿ ಸೋಂಕು ದೃಢಪಟ್ಟಿದ್ದು ಮಾರಣಾಂತಿಕ ಕೋವಿಡ್-೧೯ ಸೋಂಕಿತರ ಸಂಖ್ಯೆ 10118ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲೇ 173 ಮಂದಿಯ ವರದಿ ಪಾಸಿಟಿವ್ ಇತ್ತು. ಕಲಬುರಗಿಯಲ್ಲಿ 34 ರಾಮನಗರದಲ್ಲಿ 22 ಪ್ರಕರಣಗಳು ಪತ್ತೆಯಾಗಿದೆ. ಉಡುಪಿ ಯಲ್ಲಿ 14, ಯಾದಗಿರಿಯಲ್ಲಿ 13, ದಕ್ಷಿಣ ಕನ್ನಡ ಹಾಗೂ ಧಾರವಾಡದಲ್ಲಿ ತಲಾ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ 11 ಪ್ರಕರಣಗಳು ದಾಖಲಾಗಿವೆ. Evening Media Bulletin 24/06/2020.Please click on the…

ರಾಜ್ಯದ 8 ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಐರಾವತ ಬಸ್ಸುಗಳು ಆರಂಭ

ಬೆಂಗಳೂರು: ಕೊರೋನಾ ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್’ಡೌನ್ ಜಾರಿಗೊಳಿಸಿದ್ದರಿಂದಾಗಿ ಸಾರಿಗೆ ಬಸ್’ಗಾಲ ಸಂಚಾರ ಸ್ಥಗಿತಗೊಂಡಿತ್ತು. ಕೆಲ ಸಮಯದ ಹಿಂದಷ್ಟೇ ಕೆಲವು ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ಆರಂಭವಾಯಿತಾದರೂ ಹವಾನಿಯಂತ್ರಿತ ಬಸ್ಸುಗಳ ಸಂಚಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಇದೀಗ ರಾಜ್ಯದ 8 ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಎಸಿ ಬಸ್‍ಗಳ ಸಂಚಾರ ಆರಂಭವಾಗಲಿದೆ. ಗುರುವಾರದಿಂದ ಐರಾವತ ಬಸ್ಸುಗಳು ಸಂಚಾರ ಆರಂಭಿಸಲಿವೆ. ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಮೈಸೂರು, ಮಡಿಕೇರಿ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ವಿರಾಜಪೇಟೆಗೆ ಎಸಿ ಬಸ್‍ಗಳ ಓಡಾಟ ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ.

ಸರಳವಾಗಿ ವಿಶ್ವವಿಖ್ಯಾತ ಪೂರಿ ಜಗನ್ನಾಥ ಸ್ವಾಮಿ ರಥಯಾತ್ರೆ;

ದೆಹಲಿ: ಜಗದ್ವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆ ಸಾಂಪ್ರದಾಯಿಕ ಕೈಕರ್ಯಗಳೊಂದಿಗೆ ಆರಂಭಗೊಂಡಿದೆ. ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಥಯಾತ್ರೆ ವಿಧಿವಿಧಾನಗಳನ್ನು ಸರಳವಾಗಿ ನೆರವೇರಿಸಲಾಯಿತು. ಪ್ರತೀ ವರ್ಷ ಲಕ್ಷಾಂತರ ಜನರು ಪುರಿ ಜಗನ್ನಾಥನ ರಥೋತ್ಸವವನ್ನು ಸಾಕ್ಷೀಕರಿಸುತ್ತಿದ್ದರು. ಆದರೆ ಕೊರೋನಾ ಸಂಕಷ್ಟದ ಕಾರಣದಿಂದಾಗಿ ಈ ಬಾರಿ ರಥಯಾತ್ರೆಯಲ್ಲಿ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಹಿಸಿದ್ದಾರೆ. ಈ ರಥಯಾತ್ರೆ ಒಂದು ವಾರಗಳ ಕಾಲ ನಡೆಯಲಿದೆ.