ರಾಜ್ಯದಲ್ಲಿ ಮತ್ತೆ 397 ಕೇಸ್; 10 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆತಂಕಕಾರಿ ಪರಿಸ್ಥಿತಿಯನ್ನೇ ತಂದೊಡ್ಡಿದೆ. ಅದರಲ್ಲೂ ಬುಧವಾರದ ಹೆಲ್ತ್ ಬುಲೆಟಿನ್ ವರದಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಒಂದೇ ದಿನ 14 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 164 ಕ್ಕೆ ಏರಿಕೆಯಾಗಿದೆ.

ಅಷ್ಟೇ ಅಲ್ಲ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆವರೆಗೆ ರಾಜ್ಯದ ವಿವಿಧೆಡೆ 397 ಮಂದಿ ಯಲ್ಲಿ ಸೋಂಕು ದೃಢಪಟ್ಟಿದ್ದು ಮಾರಣಾಂತಿಕ ಕೋವಿಡ್-೧೯ ಸೋಂಕಿತರ ಸಂಖ್ಯೆ 10118ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲೇ 173 ಮಂದಿಯ ವರದಿ ಪಾಸಿಟಿವ್ ಇತ್ತು. ಕಲಬುರಗಿಯಲ್ಲಿ 34 ರಾಮನಗರದಲ್ಲಿ 22 ಪ್ರಕರಣಗಳು ಪತ್ತೆಯಾಗಿದೆ. ಉಡುಪಿ ಯಲ್ಲಿ 14, ಯಾದಗಿರಿಯಲ್ಲಿ 13, ದಕ್ಷಿಣ ಕನ್ನಡ ಹಾಗೂ ಧಾರವಾಡದಲ್ಲಿ ತಲಾ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ 11 ಪ್ರಕರಣಗಳು ದಾಖಲಾಗಿವೆ.

Related posts