ಸರಳವಾಗಿ ವಿಶ್ವವಿಖ್ಯಾತ ಪೂರಿ ಜಗನ್ನಾಥ ಸ್ವಾಮಿ ರಥಯಾತ್ರೆ;

ದೆಹಲಿ: ಜಗದ್ವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆ ಸಾಂಪ್ರದಾಯಿಕ ಕೈಕರ್ಯಗಳೊಂದಿಗೆ ಆರಂಭಗೊಂಡಿದೆ. ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಥಯಾತ್ರೆ ವಿಧಿವಿಧಾನಗಳನ್ನು ಸರಳವಾಗಿ ನೆರವೇರಿಸಲಾಯಿತು.

ಪ್ರತೀ ವರ್ಷ ಲಕ್ಷಾಂತರ ಜನರು ಪುರಿ ಜಗನ್ನಾಥನ ರಥೋತ್ಸವವನ್ನು ಸಾಕ್ಷೀಕರಿಸುತ್ತಿದ್ದರು. ಆದರೆ ಕೊರೋನಾ ಸಂಕಷ್ಟದ ಕಾರಣದಿಂದಾಗಿ ಈ ಬಾರಿ ರಥಯಾತ್ರೆಯಲ್ಲಿ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಹಿಸಿದ್ದಾರೆ.
ಈ ರಥಯಾತ್ರೆ ಒಂದು ವಾರಗಳ ಕಾಲ ನಡೆಯಲಿದೆ.

Related posts