ಪಶ್ಚಿಮ ಬಂಗಾಳದಲ್ಲಿ ಜು.31 ವರೆಗೆ ಲಾಕ್’ಡೌನ್

ದೆಹಲಿ: ದೇಶಾದ್ಯಂತ ಕೊರೋನಾ ಆತಂಕಕಾರಿ ರೀತಿಯಲ್ಲಿ ಹರಡುತ್ತಿದೆ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಿದ್ದಾರೆ. ಅತ್ತ ಪಶ್ಚಿಮ ಬಂಗಾಳದಲ್ಲೂ ಪರಿಸ್ಥಿತಿ ವಿಷಮ ರೀತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಲಾಕ್ ಡೌನ್ ನ್ನು ಜು.31 ವರೆಗೆ ವಿಸ್ತರಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಲಾಕ್’ಡೌನ್ ಜಾರಿಯಲ್ಲಿದ್ದು ಜೂ.30ಕ್ಕೆ ಮುಕ್ತಾಯಗೊಳ್ಳಲಿದೆ. ಅದನ್ನು ಜುಲೈ ತಿಂಗಳಾಂತ್ಯದವರೆಗೆ ಮುಂದುವರಿಸಲಾಗಿದೆ. ಆದರೆ ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

Related posts